ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಾಲಾ, ಅಂಗನವಾಡಿ ಕೇಂದ್ರಗಳ ದುರಸ್ತಿ

Vishwanath S
Updated On : 15 Jan 2014, 1:11 am

ಕೆ.ಆರ್. ನಗರ: ಕಳೆದ ಮೂರು ವರ್ಷಗಳ ಅವಧಿಯಲ್ಲಿ 11 ಲಕ್ಷ ವೆಚ್ಚದಲ್ಲಿ ಕುಪ್ಪೆ ಹಂತ ತಾಪಂ ವ್ಯಾಪ್ತಿಗೆ ಬರುವ ಗ್ರಾಮಗಳ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಮತ್ತು ದುರಸ್ತಿಪಡಿಲು ಕ್ರಮ ಕೈಗೊಳ್ಳಲಾಗಿದೆ ತಾಪಂ ಅಧ್ಯಕ್ಷೆ ಶಶಿಕಲಾ ರಮೇಶ್ ಹೇಳಿದರು.
ತಾಲೂಕಿನ ಹೊಸೂರು ಶ್ರೀ ರಾಮ ಪ್ರೌಢಶಾಲೆಯಲ್ಲಿ ಜಿಪಂ ವತಿಯಿಂದ ಅಕ್ಷರ ದಾಸೋಹ ಕಾರ್ಯಕ್ರಮದಡಿ 3.61 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅಡುಗೆಮನೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹೊಸೂರು ಸರ್ಕಾರಿ ಪ್ರೌಢಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಒಂದು ಲಕ್ಷ, ಚುಂಚನಕಟ್ಟೆ ಸರ್ಕಾರಿ ಪ್ರೌಢಶಾಲೆಯ ಆಧುನೀಕರಣಕ್ಕೆ 3.30 ಲಕ್ಷ, ಹೊಸೂರು ಗ್ರಾಮದ ಎರಡು ಅಂಗನವಾಡಿ ಕೇಂದ್ರಗಳ ದುರಸ್ತಿ ನೆಲಹಾಸು ಮತ್ತು ಕಾಂಪೌಂಡ್ ನಿರ್ಮಾಣಕ್ಕೆ 3.40 ಲಕ್ಷ, ಹಳಿಯೂರು ಅಂಗನವಾಡಿ ದುರಸ್ತಿಗೆ ಒಂದು ಲಕ್ಷ, ಶ್ರೀರಾಮಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದುರಸ್ತಿಗೆ ಒಂದು ಲಕ್ಷ, ಚುಂಚನಕಟ್ಟೆ ಅಂಗನವಾಡಿ ಕೇಂದ್ರದ ದುರಸ್ತಿಗೆ 1.10 ಲಕ್ಷಗಳನ್ನು ತಮ್ಮ ಅನುದಾನದಲ್ಲಿ ನೀಡಿರುವುದಾಗಿ ಮಾಹಿತಿ ನೀಡಿದರು.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಸರ್ಕಾರದಿಂದ ಉಚಿತವಾಗಿ ನೀಡಿರುವ ಸೈಕಲ್‌ಗಳನ್ನು ಶಾಲೆಯ 52 ಮಂದಿ ವಿದ್ಯಾರ್ಥಿಗಳಿಗೆ ಹಳಿಯೂರು ಗ್ರಾಪಂ ಅಧ್ಯಕ್ಷ ರಾಜೇಗೌಡ ವಿತರಿಸಿದರು. ಹಳಿಯೂರು ಗ್ರಾಪಂ ಸದಸ್ಯೆ ಮಣಿಲಾ, ಶಾಲೆಯ ಅಧ್ಯಕ್ಷ ಎಚ್.ಡಿ. ರಾಜು, ಎಚ್.ಡಿ. ಕೃಷ್ಣೇಗೌಡ, ಮುಖ್ಯ ಶಿಕ್ಷಕ ಎಚ್.ಪಿ. ಗೋವಿಂದೇಗೌಡ, ಶಿಕ್ಷಕರಾದ ರಮೇಶ್, ಯೋಗಣ್ಣ, ಸುಬ್ಬೇಗೌಡ, ಸವಿತ, ಶೀಲಾ, ಷಣ್ಮುಖ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement