ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅದ್ಧೂರಿಯಾಗಿ ನಡೆದ ಸೀತಾ ಕಲ್ಯಾಣೋತ್ಸವ

Vishwanath S
Updated On : 16 Jan 2014, 1:29 am

ಕ.ಪ್ರ.ವಾರ್ತೆ , ಕೆ.ಆರ್. ನಗರ , ಜ. 15
ತಾಲೂಕಿನ ಚುಂಚನಕಟ್ಟೆಯಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಬ್ರಹ್ಮ ರಥೋತ್ಸವಕ್ಕಿಂತ ಮೂರು ದಿನ ಮುಂಚಿತವಾಗಿ ನಡೆಯುವ ಸೀತಾ-ಶ್ರೀರಾಮ ಕಲ್ಯಾಣೋತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ರಾತ್ರಿ 7ಕ್ಕೆ ಶ್ರೀರಾಮ ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ದೇವಾಲಯದ ಸುತ್ತ ಮೆರವಣಿಗೆ ಮಾಡಿದ ಬಳಿಕ ದೇವಾಲಯದಲ್ಲಿ ಅಲಂಕರಿಸಿದ್ದ ಮಂಟಪಕ್ಕೆ ಕರೆತಂದು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಅರ್ಚಕ ಶ್ರೀನಿವಾಸ್ ನೇತೃತ್ವದಲ್ಲಿ ಕಲ್ಯಾಣೋತ್ಸವ ನೆರವೇರಿಸಿ, ಸೀತಾಮಾತೆಗೆ ತಾಳಿಯನ್ನು ಹಾಕುವ ಮೂಲಕ ಸೀತಾ ಕಲ್ಯಾಣವನ್ನು ನೆರವೇರಿಸಿದಾಗ ಹಾಜರಿದ್ದ ಸಾವಿರಾರು ಭಕ್ತರು ಚಪ್ಪಾಳೆ ತಟ್ಟಿ ಜಯಘೋಷ ಮೊಳಗಿಸಿ ವಿಶೇಷ ಪೂಜೆ ಸಲ್ಲಿಸಿದರು. ಕಲ್ಯಾಣೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಚಿಕ್ಕಕೊಪ್ಪಲು ಗ್ರಾಮದ ನಿವೃತ್ತ ಶಿಕ್ಷಕ ಸಿ.ಟಿ. ಜಗದೀಶ್, ಸರೋಜ ಮತ್ತು ತಾಯಮ್ಮ ಬೀರೇಗೌಡ ಕುಟುಂಬದವರು ಅನ್ನ ಸಂತರ್ಪಣೆ ಏರ್ಪಡಿಸಿದ್ದರು.
ಅಸಮಾಧಾನ- ಸೋಮವಾರ ರಾತ್ರಿ ನಡೆದ ಸೀತಾ ಕಲ್ಯಾಣೋತ್ಸವ ರಾತ್ರಿ 7.15ಕ್ಕೆ ಆರಂಭಗೊಂಡರೂ ಸಮಯಕ್ಕೆ ಸರಿಯಾಗಿ ಹಾಜರಾಗದೆ ನಿರ್ಲಕ್ಷ್ಯ ವಹಿಸಿ ತಹಸೀಲ್ದಾರ್ ಬಿ.ಎನ್. ವೀಣಾ ಅವರು 8.05ರ ಸಮಯಕ್ಕೆ ಆಗಮಿಸಿದ್ದರಿಂದ ನೆರೆದಿದ್ದ ಭಕ್ತಾದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ನಿಗದಿತ ಸಮಯಕ್ಕೆ ಕಲ್ಯಾಣೋತ್ಸವ ನೆರವೇರಿಸದಿದ್ದರೆ ಸಮಯ ನಿಗದಿಯನ್ನು ಮಾಡುವುದಾದರೂ ಏಕೆ ಎಂದು ತರಾಟೆಗೆ ತೆಗೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement