ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆಟೋ ಪರಿಷ್ಕೃತ ಪ್ರಯಾಣ ದರದ ಕಾರ್ಡ್ ವಿತರಣೆ

Vishwanath S
Updated On : 16 Jan 2014, 1:57 am

ಮೈಸೂರು: ಆಟೋ ಪರಿಷ್ಕೃತ ದರದ ಕಾರ್ಡ್‌ಗಳನ್ನು ಬುಧವಾರ ಸಂಸದ ಎಚ್. ವಿಶ್ವನಾಥ್ ಬುಧವಾರ ಆಟೋ ಚಾಲಕರಿಗೆ ವಿತರಿಸಿದರು.
ನಗರದ ಗ್ರಾಮಾಂತರ ಬಸ್ ನಿಲ್ದಾಣದಲ್ಲಿನ ಪ್ರೀ ಪೇಯ್ಡ್ ಆಟೋ ನಿಲ್ದಾಣದಲ್ಲಿನ ಆಟೋ ಚಾಲಕರಿಗೆ ಸಾಂಕೇತಿಕವಾಗಿ ಪರಿಷ್ಕೃತ ದರದ ಕಾರ್ಡ್ ವಿತರಿಸಿ, ಆಟೋ ಅನಿಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಆಟೋ ಚಾಲಕರಿಗೆ ಉಂಟಾಗುತ್ತಿದ್ದ ತೊಂದರೆ ತಪ್ಪಿಸಲು ದರ ಪರಿಷ್ಕರಿಸಲಾಗಿದೆ ಎಂದರು.
ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಕಾಂಗ್ರೆಸ್ ಮುಖಂಡ ಎಂ. ಲಕ್ಷ್ಮಣ್ ಇದ್ದರು.
ಸಿಎಂಇ ಕಾರ್ಯಕ್ರಮ
ಮೈಸೂರು: ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಜ.17ರ ಸಂಜೆ 7.30ಕ್ಕೆ ನಜರ್‌ಬಾದ್‌ನ ಅಬ್ಬಾ ರಸ್ತೆಯಲ್ಲಿರುವ ಹೊಟೇಲ್ ಫಾರ್ಚ್ಯೂನ್ ಜೆ.ಪಿ. ಪ್ಯಾಲೇಸ್‌ನಲ್ಲಿ ವೈದ್ಯರಿಗೆ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಏರ್ಪಡಿಸಿದೆ. ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯ ಆಂಕೋಲಾಜಿಸ್ಟ್ ವೈದ್ಯಕೀಯ ವಿಭಾಗದ ಸಲಹಾ ತಜ್ಞ ಡಾ. ರಾಧೇಶ್ಯಾಮ್‌ನಾಯಕ್ ಹಾಗೂ ಡಾ. ಬೆಳ್ಳಿಯಪ್ಪ ಉಪನ್ಯಾಸ ನೀಡುವರು.
ಉಚಿತ ಶಿಬಿರ
ಪ್ರೇರಣಾ ಕ್ಲಿನಿಕ್ ವತಿಯಿಂದ ಜ.17ರ ಬೆಳಗ್ಗೆ 10.30 ರಿಂದ ಸಂಜೆ 4.30ರವರೆಗೆ ಗರ್ಭಕೋಶ ಕ್ಯಾನ್ಸರ್ ಸ್ಕ್ರೀನಿಂಗ್ ಉಚಿತ ಶಿಬಿರ ಯೋಜಿಸಿದೆ. ಹೆಚ್ಚಿನ ಮಾಹಿತಿಗಾಗಿ ಡಾ.ವಿಜಯ ಶ್ರೀನಿವಾಸ್, ಮೊ. 9986285724 ಸಂಪರ್ಕಿಸಿ.
ಸ್ವರ್ಣಾಮೃತ ಪ್ರಾಶನ
ಕೃಷ್ಣಮೂರ್ತಿಪುರಂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕಾಲೇಜಿನಲ್ಲಿ ಜ.17ರ ಬೆಳಗ್ಗೆ 6.30 ರಿಂದ ಂಜೆ 5ರವರೆಗೆ ಸ್ವರ್ಣಾಮೃತ ಪ್ರಾಶನ ಹಾಕಲಿದೆ. ಹೆಚ್ಚಿನ ಮಾಹಿತಿಗಾಗಿ ಡಾ.ಗುರರಾಜ ಅನಿಲ್ ಭಟ್, ಮೊ. 9880856916 ಸಂಪರ್ಕಿಬಹುದು.
ಅಪ್ರೆಂಟಿಸ್ ಮೇಳ
ಮೈಸೂರು: ದಕ್ಷಿಣ ವಲಯ ಶಿಶಿಕ್ಷು ತರಬೇತಿ ಮಂಡಳಿ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜ.21ರ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ನಗರದ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಅಪ್ರೆಂಟಿಸ್ ಮೇಳ ಆಯೋಜಿಸಿದೆ ಎಂದು ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ. ಈ ಮೇಳದಲ್ಲಿ ಹಲವಾರು ಉದ್ಯೋಗದಾತರು ಭಾಗವಹಿಸಲಿದ್ದು, ಆಸಕ್ತಿಯುಳ್ಳ ಮೂರು ವರ್ಷದ ಎಂಜಿನಿಯರಿಂಗ್ ಡಿಪ್ಲೋಮಾ ಮುಗಿಸಿದ ಹಾಗೂ 4 ವರ್ಷದ ಎಂಜಿನಿಯರಿಂಗ್ ಪದವಿ ಮುಗಿಸಿದ ಯಾವುದೇ ಬ್ರಾಂಚಿನ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಅಪ್ರೆಂಟಿಸ್‌ಶಿಪ್ ಮೇಳದಲ್ಲಿ ಭಾಗವಹಿಸಬಹುದು.
ಬಳಗಕ್ಕೆ ಆಯ್ಕೆ
ಮೈಸೂರು: ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜನಪದ ವಿಭಾಗದ ಕರ್ನಾಟಕ ಜನಪದ ಪದವೀಧರರ ಬಳಗದ ಪದಾಧಿಕಾರಿಗಳಾಗಿ ಎಚ್.ಎಂ. ಉಮೇಂದ್ರಕುಮಾರ್ (ಅಧ್ಯಕ್ಷರು), ಪಿ.ಎಂ. ಕುಮಾರ್, ಎಂ.ಎನ್. ದಿನೇಶ್ (ಉಪಾಧ್ಯಕ್ಷರು), ಉಮೇಶ್, ಆರ್. ರವಿಚಂದ್ರ (ಪ್ರಧಾನ ಕಾರ್ಯದರ್ಶಿ), ಎಚ್.ಪಿ. ಮಂಜು (ಖಜಾಂಚಿ) ಆಯ್ಕೆಯಾಗಿದ್ದಾರೆ.
ಶೈಕ್ಷಣಿಕ ಅಭಿವೃದ್ಧಿಗೆ  ಸಹಕಾರ ನೀಡಿ
ಟಿ. ನರಸೀಪುರ: ತಳ ಮಟ್ಟದಲ್ಲಿಯೇ ಸರ್ಕಾರಿ ಶಾಲೆಯ ಮಕ್ಕಳಿಗೆ ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಿಕೊಟ್ಟು, ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಸೋಸಲೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ. ಪರಶಿವಮೂರ್ತಿ ಹೇಳಿದರು.
ತಾಲೂಕಿನ ತುಂಬಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಊಟದ ತಟ್ಟೆಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಯ ಮಕ್ಕಳೇ ಹೆಚ್ಚು ಬುದ್ಧಿವಂತರಿದ್ದಾರೆ. ಕಲಿಯುವ ಹಂತದಲ್ಲಿಯೇ ಅವರಿಗೆ ಅಗತ್ಯವಿರುವ ಸೌಕರ್ಯ ಕಲ್ಪಿಸಬೇಕು ಎಂದರು.
ತಾಪಂ ಮಾಜಿ ಅಧ್ಯಕ್ಷ ತುಂಬಲ ಅಂದಾನಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಮಟ್ಟದಲ್ಲಿ ಗುಣಮಟ್ಟ ಕಾಯ್ದುಕೊಂಡು ಪ್ರಗತಿಯ ಹೆಜ್ಜೆಯನ್ನಿಡಲು ಜನಸಮುದಾಯ ಸಹಭಾಗಿತ್ವ ವಹಿಸಬೇಕು. ನೆರೆಯ ಸೋಸಲೆ ಗ್ರಾಮದವರಾದ ಪರಶಿವಮೂರ್ತಿ ಅವರು 15 ಸಾವಿರ ವೆಚ್ಚದಲ್ಲಿ ಊಟದ ತಟ್ಟೆಗಳನ್ನು ಶಾಲೆಯ ಮಕ್ಕಳಿಗೆ ದಾನವಾಗಿ ನೀಡುವ ಮೂಲಕ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಕೈಜೋಡಿಸಿರುವುದು ಹೆಮ್ಮೆಯ ವಿಷಯ ಎಂದರು.
'ಸರ್ವ ರೋಗಕ್ಕೂ ಯೋಗ ಮದ್ದು'
ಕ.ಪ್ರ.ವಾರ್ತೆ , ಕೆ.ಆರ್. ನಗರ , ಜ. 15
ಸರ್ವ ರೋಗಕ್ಕೂ ಯೋಗ ಮದ್ದಾಗಿದ್ದು, ಪಟ್ಟಣದ ಜನತೆ ಯೋಗ ತರಬೇತಿ ಪಡೆದುಕೊಳ್ಳುವ ಮೂಲಕ ವಿವಿಧ ರೋಗಗಳಿಂದ ಮುಕ್ತಿ ಹೊಂದಿ ಉತ್ತಮ ಆರೋಗ್ಯ ಹೊಂದಬೇಕೆಂದು ಪತಂಜಲಿ ಯೋಗಾಶ್ರವು ಟ್ರಸ್ಟ್ ಅಧ್ಯಕ್ಷ ಡಾ.ಶಿವನಂಜಪ್ಪ ಹೇಳಿದರು.
ಪಟ್ಟಣದ ಅಖಿಲ ನಾಮಧಾರಿಗೌಡ ಸಮುದಾಯ ಭವನದಲ್ಲಿ ಅಖಿಲ ನಾಮಧಾರಿ ಮಹಿಳಾ ಸಂಘದ ವತಿಯಿಂದ ಆಯೋಜಿಸಿದ್ದ ಒಂದು ತಿಂಗಳ ಉಚಿತ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿಚಿತ್ರ ಕಾಯಿಲೆಗಳು ಕಂಡುಬರುತ್ತಿದ್ದು, ಇವುಗಳ ನಿಯಂತ್ರಣಕ್ಕಾಗಿ ಸಾವಿರಾರು ರು.ಗಳನ್ನು ವೆಚ್ಚ ಮಾಡುವ ಬದಲು ನಿತ್ಯ ಒಂದು ಗಂಟೆ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳು ಏರ್ಪಡಿಸುವ ಉಚಿತ ಯೋಗ ತರಗತಿಗಳಲ್ಲಿ ಭಾಗವಹಿಸಿ ಆರೋಗ್ಯವಂತರಾಗಿ ಎಂದು ಕರೆ ನೀಡಿದರು.
ಸಂಘದ ತಾ. ಅಧ್ಯಕ್ಷ ಎನ್.ಎ. ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಗುರುರಾಜ್, ಯೋಗಗುರು ಮುದ್ದುಕೃಷ್ಣ, ಯೋಗ ಪಟುಗಳಾದ ಮಾದೇಗೌಡ, ರೇವಣ್ಣ, ಗೋಪಾಲ್‌ರಾಜ್, ರೇವಣ್ಣ, ಪದ್ಮಾವತಿ, ವಿಶ್ವನಾಥಶೆಟ್ಟಿ, ಕಲ್ಪನಾ, ಸಿ.ಇ. ತ್ರಿವೇಣಿ, ಸಂಘದ ಅಧ್ಯಕ್ಷೆ ಲೀಲಾಂಬಿಕಾ, ಉಪಾಧ್ಯಕ್ಷೆ ಶಾಂತಕುಮಾರಿ, ಪ್ರಧಾನ ಕಾರ್ಯದರ್ಶಿ ಪ್ರಭಾ, ಖಜಾಂಚಿ ಸುಜಾತ, ನಿರ್ದೇಶಕರಾದ ಸುಧಾ, ಲಲಿತಮ್ಮ, ಗಾಯತ್ರಿ ಇದ್ದರು,
ವಾಹನ ಡಿಕ್ಕಿ: ಕೂಲಿಕಾರ್ಮಿಕ ಸಾವು
ಹುಣಸೂರು: ಕೂಲಿ ಕಾರ್ಮಿಕನಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಹುಣಸೂರು- ಮಡಿಕೇರಿ ಹೆದ್ದಾರಿಯ ಕಲ್‌ಬೆಟ್ಟದ ಬಳಿ ಜರುಗಿದೆ. ತಾಲೂಕಿನ ಕಲ್‌ಬೆಟ್ಟ ಟಿಂಬರ್ ಯಾರ್ಡ್ ಎದುರಿನ ಕಾವೇರಿ ಬ್ರಿಕ್ಸ್‌ನಲ್ಲಿ ಕಾರ್ಮಿಕನಾಗಿದ್ದ ಎಚ್.ಡಿ. ಕೋಟೆ ತಾಲೂಕಿನ ಎನ್. ಬೇಗೂರಿನ ಗೋಪಾಲ್ (45) ಮೃತಪಟ್ಟ ವ್ಯಕ್ತಿ. ಸಮೀಪದ ಯಶೋಧರಪುರದಿಂದ ರಾತ್ರಿ ಅಂಗಡಿ ಸಾಮಾನು ಖರೀದಿಸಿ ವಾಪಸ್ ಬರುತ್ತಿದ್ದ ವೇಳೆ ಘಟನೆ ಜರುಗಿದ್ದು. ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದರು. ಗ್ರಾಮಾಂತರ ಎಸ್‌ಐ ರಾಘವೇಂದ್ರ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.
ಜೂಜಾಡುತ್ತಿದ್ದವರ ಬಂಧನ
ಹುಣಸೂರು: ಹಾಡಹಗಲೇ ಗ್ರಾಮದ ಪ್ರಮುಖ ಸ್ಥಳದಲ್ಲಿ ಜೂಜಾಡುತ್ತಿದ್ದ ಗುಂಪೊಂದನ್ನು ಬಿಳಿಕೆರೆ ಪೊಲೀಸ್ ಠಾಣಾಧಿಕಾರಿಗಳು ಬಂಧಿಸಿ 2,200 ನಗದು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಬನ್ನಿಕುಪ್ಪೆ ಗೇಟ್ ಎಸ್‌ಎಂಎಸ್ ಬಾರ್ ಬಳಿ ಜೂಜಾಡುತ್ತಿದ್ದ 15ಕ್ಕೂ ಹೆಚ್ಚು ಮಂದಿ ಇದ್ದ ಗುಂಪೊಂದನ್ನು ಪೊಲೀಸರು ಬಂಧಿಸಿ, ಜೂಜಾಟಕ್ಕಿಟ್ಟಿದ್ದ ಹಣವನ್ನು ವಶಪಡಿಸಿಕೊಂಡರು. ದಾಳಿ ವೇಳೆ 6 ಮಂದಿಯನ್ನು ಮಾತ್ರ ಬಂಧಿಸಲು ಸಾಧ್ಯವಾಗಿದ್ದು, ಮಿಕ್ಕವರು ಪರಾರಿಯಾಗಿದ್ದಾರೆ. ಬನ್ನಿಕುಪ್ಪೆಯ ದೇವಯ್ಯ, ಶಿವರಾಜನಾಯ್ಕ, ಮಹೇಶ್, ಸೋಮಯ್ಯ, ತೆಂಕಲಕೊಪ್ಪಲಿನ ಶಿವಮಲ್ಲಯ್ಯ, ಕಾಡನಕೊಪ್ಪಲಿನ ಕಾಂತರಾಜು ಬಂಧಿತರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement