ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

28 ರಂದು ಸುತ್ತೂರಿನಲ್ಲಿ ಸಾಮೂಹಿಕ ವಿವಾಹ

Vishwanath S
Updated On : 17 Jan 2014, 12:53 pm

ಮೈಸೂರು: ಸುತ್ತೂರು ಶ್ರೀಕ್ಷೇತ್ರದಲ್ಲಿ ಜ.27 ರಿಂದ ಫೆ.1ರವರೆಗೆ ನಡೆಯುವ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸದ ಅಂಗವಾಗಿ ಜ.28 ರಂದು ಉಚಿತ ಸಾಮೂಹಿಕ ವಿವಾಹ ಏರ್ಪಡಿಸಿದೆ.
ಸಮಾಜದ ಎಲ್ಲ ವರ್ಗದವರಿಗೂ ಮುಕ್ತ ಅವಕಾಶವಿರುತ್ತದೆ. ಈ ವಿವಾಹದಲ್ಲಿ ವಧುವಿಗೆ ಸೀರೆ, ಕುಪ್ಪಸ, ಕಾಲುಂಗುರ ಹಾಗೂ ಮಾಂಗಲ್ಯ, ವರನಿಗೆ ಪಂಚೆ, ವಲ್ಲಿ ಹಾಗೂ ಶರ್ಟ್‌ಗಳನ್ನು ನೀಡಲಾಗುತ್ತದೆ. ವಧು, ವರರ ಜೊತೆಯಲ್ಲಿ ಬರುವ ಬಂಧುವರ್ಗದವರಿಗೆ ಪ್ರಸಾದ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಿವಾಹವಾಗ ಬಯಸುವವರು ನಿಗದಿತ ಅರ್ಜಿ ನಮೂನೆಯಲ್ಲಿ ಪೂರ್ಣ ವಿವರಗಳನ್ನು ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಜ.25ರೊಳಗಾಗಿ ನೋಂದಾಯಿಸಿಕೊಳ್ಳಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಆರ್. ಕುಮಾರಸ್ವಾಮಿ, ಮೊ. 9448674702, ಸಿ.ಮಹದೇವಪ್ರಸಾದ್, ಮೊ. 9449030588 ಮತ್ತು ಜಾತ್ರಾ ಮಹೋತ್ಸವ ಕಾರ್ಯಾಲಯ, ದೂ. 2548201 ಸಂಪರ್ಕಿಸಬಹುದು.
ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ: ಜಾತ್ರಾ ಮಹೋತ್ಸವದ ಅಂಗವಾಗಿ ಜ.30 ರಂದು ಮಕ್ಕಳಿಗಾಗಿ ರಾಜ್ಯಮಟ್ಟದ ಸ್ಪರ್ಧೆಯನ್ನು ಸುತ್ತೂರು ಶ್ರೀ ಕ್ಷೇತ್ರದಲ್ಲಿ ಏರ್ಪಡಿಸಿದೆ. ಮಕ್ಕಳಿಗೆ ನಾಲ್ಕು ವಿಭಾಗಗಳಲ್ಲಿ ಚಿತ್ರ ರಚಿಸುವ ಸ್ಪರ್ಧೆ ಇರುತ್ತದೆ. ಒಂದರಿಂದ 2ನೇ ತರಗತಿಯವರೆಗೆ ಮಕ್ಕಳ ವಿವೇಚನೆಗೆ ಬಿಟ್ಟಿರುತ್ತದೆ. 3 ರಿಂದ 4ನೇ ತರಗತಿಯವರೆಗೆ ರಾಷ್ಟ್ರೀಯ ಹಬ್ಬಗಳು, 5 ರಿಂದ 7ನೇ ತರಗತಿಯವರೆಗೆ ಪಟಾಕಿಯಿಂದಾಗುವ ದುಷ್ಪರಿಣಾಮಗಳು, 8 ರಿಂದ 10ನೇ ತರಗತಿಯವರೆಗೆ - ಜಲ ಸಂರಕ್ಷಣೆ ಕುರಿತಾಗಿ ಚಿತ್ರ ಬಿಡಸಬಹುದಾಗಿದೆ.
ರಾಜ್ಯದ ಯಾವುದೆ ಭಾಗದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಡ್ರಾಯಿಂಗ್ ಷೀಟ್‌ಗಳನ್ನು ಹೊರತುಪಡಿಸಿ ಸ್ಪರ್ಧೆಗೆ ಬೇಕಾಗುವ ಇತರೆ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರಬೇಕು. ವಿಜೇತರಿಗೆ ಪಾರಿತೋಷಕ, ನಗದು ಹಾಗೂ ಆಕರ್ಷಕ ಬಹುಮಾನ ನೀಡಲಾಗುವುದು. ಡಿ.ಕುಬೇರಪ್ಪ, ಮೊ.9480281097, ಜಿ.ಆರ್. ನಿಡವಣಿ, ಮೊ. 9448957905 ಅಥವಾ ದೂ.2548201 ಸಂಪರ್ಕಿಸಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement