ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಡಗೂರಿನಲ್ಲಿ ಆರೋಗ್ಯ ತಪಾಸಣೆ

Vishwanath S
Updated On : 17 Jan 2014, 12:54 pm

ಕೆ.ಆರ್. ನಗರ:ಮೈಸೂರಿನ ರೋಟರಿ ವಿಜಯನಗರ ಮತ್ತು ಜೆಎಸ್‌ಎಸ್ ಆಸ್ಪತ್ರೆ ವತಿಯಿಂದ ಜ.18 ರಂದು ತಾಲೂಕಿನ ಅಡಗೂರು ಗ್ರಾಮದಲ್ಲಿ ಉಚಿತ  ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದೆ ಎಂದು ರೋಟರಿ ಅಧ್ಯಕ್ಷ ಡಾ.ಪಿ. ದಿಲೀಪ್‌ಕುಮಾರ್ ಹೇಳಿದರು.
ಶಿಬಿರದಲ್ಲಿ ಹೃದ್ರೋಗ, ನರರೋಗ, ಮೂತ್ರಪಿಂಡ ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ಮೂಳೆ ಮತ್ತು ಕೀಲು ಸಾಮಾನ್ಯ ಶಸ್ತ್ರ ಚಿಕಿತ್ಸೆ, ಮಕ್ಕಳ ತಜ್ಞರು, ಮೂತ್ರಕೋಶ ಚಿಕಿತ್ಸೆ ಈ ರೋಗಗಳಿಗೆ ಸಂಬಂಧಿಸಿದಂತೆ ತಪಾಸಣೆ, ಚಿಕಿತ್ಸೆ ಮತ್ತು ಸಲಹೆ ನೀಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 9ಕ್ಕೆ ಸಂಸದ ಎಚ್.ವಿಶ್ವನಾಥ್ ಶಿಬಿರ ಉದ್ಘಾಟಿಸುವರು. ಶಾಸಕ ಸಾ.ರಾ. ಮಹೇಶ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ಕೆ.ಮಹದೇವು, ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ಮೂಳೆತಜ್ಞ ಡಾ.ಮೆಹಬೂಬ್‌ಖಾನ್, ಜೆಎಸ್‌ಎಸ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಎಚ್.ಪಿ. ಗುರುಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಡಾ.ಪಿ. ಶಿವಪ್ರಸಾದ್ ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.
ರೋಟರಿ ಕಾರ್ಯದರ್ಶಿ ಎಂ.ಎಸ್. ಹರೀಶ್, ರೋಟೆರಿಯನ್ ಡಾ. ಪ್ರವೀಣ್, ವೈ.ಎಸ್. ರಾಘವೇಂದ್ರ, ಡಿ.ಸಿ. ಚಂದ್ರಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement