ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮರಳು ಲಾರಿ ಮೇಲೆ ಜಿಪಿಎಸ್ ಹದ್ದಿನ ಕಣ್ಣು

Vishwanath S
Updated On : 17 Jan 2014, 12:53 pm

ಮೈಸೂರು,: ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಲು ನಿರ್ಧರಿಸಿರುವ ಪೊಲೀಸರು ಮರಳು ಯಾರ್ಡ್‌ಗಳು ಇರುವ ಪ್ರದೇಶದಲ್ಲಿ ಜಿಪಿಎಸ್ ಅಳವಡಿಸಲು ತೀರ್ಮಾನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗುರುವಾರ ಜಿಪಿಎಸ್ ಅಳವಡಿಕೆಗೆ ಕಡೆ ದಿನವಾಗಿದೆ. ಶುಕ್ರವಾರದಿಂದ ಜಿಪಿಎಸ್ ಅಳವಡಿಸಿದ ಲಾರಿಗಳಿಗೆ ಆನ್‌ಲೈನ್ ಮೂಲಕ ರಹದಾರಿ ನೀಡಲಾಗುತ್ತದೆ. ಯಾರು ಜಿಪಿಎಸ್ ಅಳವಡಿಸಿಕೊಂಡು ಆಫ್ ಮಾಡಿ ವಾಹನ ಚಲಾಯಿಸುತ್ತಾರೋ ಮತ್ತು ರೀಚಾರ್ಜ್ ಮಾಡಿಸಿಕೊಂಡಿಲ್ಲವೋ ಅವರಿಗೆ ಗುರುವಾರವೆ ಕಡೆಯ ದಿನವಾಗಿತ್ತು.
ಜಿಪಿಎಸ್ ತಂತ್ರಜ್ಞಾನವನ್ನು ಟಿ.ನರಸೀಪುರ ಮತ್ತು ನಂಜನಗೂಡು ತಾಲೂಕು ವ್ಯಾಪ್ತಿಯ ಮರಳು ಯಾರ್ಡ್‌ಗಳು ಇರುವ ಕಡೆಗಳಲ್ಲಿ ಅಳವಡಿಸಲಾಗುತ್ತಿದೆ. ಇದರಿಂದ ಯಾವ ಲಾರಿ ಯಾರ್ಡ್ ಪ್ರವೇಶಿಸಿ ಮರಳು ತರುತ್ತಿದೆ. ಯಾವ ಲಾರಿ ಎಷ್ಟು ಬಾರಿ ಸಂಚರಿಸಿದೆ ಎಂಬೆಲ್ಲಾ ಮಾಹಿತಿ ಲಭ್ಯವಾಗುತ್ತದೆ. ಒಂದು ರಹದಾರಿ ಉಳ್ಳ ಲಾರಿ ದಿನದಲ್ಲಿ ನಾಲ್ಕು ಬಾರಿ ಮಾತ್ರ ಮರಳು ಸಾಗಿಸಬಹುದು. ಅದಕ್ಕೂ ಹೆಚ್ಚು ಬಾರಿ ಕಾಣಿಸಿಕೊಂಡರೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೊರಗುತ್ತಿಗೆ ಆಧಾರದ ಮೇಲೆ ತಂತ್ರಜ್ಞಾರೊಬ್ಬರನ್ನು ನೇಮಿಸಿಕೊಂಡು ತಮ್ಮ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ತೆರೆದು ಮರಳು ಲಾರಿಯ ಕಾರ್ಯಾಚರಣೆ ವೀಕ್ಷಿಸಲಾಗುವುದು. ರಾತ್ರಿ ವೇಳೆ ಅಕ್ರಮವಾಗಿ ಜಿಪಿಎಸ್ ಅಥವಾ ರಹದಾರಿ ಇಲ್ಲದೆ ಮರಳು ಸಾಗಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಆರೇಳು ತಿಂಗಳಿಂದ ಸುಮಾರು 350 ಲಾರಿ ವಶಕ್ಕೆ ಪಡೆದು, 750 ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement