ಅಯ್ಯರ್ ವಿರುದ್ಧ ನಮೋ ಬ್ರಿಗೇಡ್ ಪ್ರತಿಭಟನೆ
ನಂಜನಗೂಡು: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಾಕಾರಿ ಮಾತನಾಡಿರುವ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ವಿರುದ್ಧ ಪಟ್ಟಣದ ನಮೋ ಬ್ರೀಗೇಡ್ಸ್ ಹಾಗೂ ಬಿಜೆಪಿ ವತಿಯಿಂದ ಇಲ್ಲಿನ ಹುಲ್ಲಹಳ್ಳಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಸಾರ್ವಜನಿಕರಿಗೆ ಟೀ ವಿತರಿಸಿದರು.
ಬಿಜೆಪಿ ಹಿರಿಯ ಮುಖಂಡ ಎನ್.ಆರ್. ಕೃಷ್ಣಪ್ಪಗೌಡ ಮಾತನಾಡಿ, ಈ ದೇಶ ಅಭಿವೃದ್ಧಿ ಹೊಂದಲು ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು. ಭ್ರಷ್ಟಚಾರ, ಕೋಮುವಾದಿ ಪಕ್ಷ ಕಾಂಗ್ರೆಸ್ ಪಕ್ಷವನ್ನು ಜನತೆ ತಿರಸ್ಕರಿಸಬೇಕೆಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಂ. ಮಹೇಶ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ವಾಲ್ಟರ್ ಬೋಕೆಲೋ, ಮುಖಂಡರಾದ ತಾಪಂ ಸದಸ್ಯ ರವೀಂದ್ರ ಗುರುಪಾದಪ್ಪ, ಶೇಖರ್, ನಾಗರಾಜು, ಸಂಜಯ್ ಶರ್ಮ, ಕಪಿಲೇಶ್, ಸೋಮಶೇಖರ್, ಶಾಸ್ತ್ರಿ, ಹರೀಶ್, ಶಿವಕುಮಾರ್, ಹನುಮಂತು, ಮಂಜು, ಚಂದ್ರು ಇದ್ದರು.
ಇದೇ ವೇಳೆ ವೀರಮರಣ ಹೊಂದಿದ ಎಸ್ಐ ಮಲ್ಲಿಕಾರ್ಜುನ ಬಂಡೆ ಅವರಿಗೆ 2 ನಿಮಿಷ ಮೌನ ಆಚರಿಸಿ ಗೌರವ ಸೂಚಿಸಲಾಯಿತು.