ಈದ್ಮಿಲಾದ್ ಉನ್ ನಬಿ ಆಚರಣೆ
ಮೈಸೂರು: ನಗರದ ಸಾಡೇ ರಸ್ತೆಯಲ್ಲಿರುವ ಅಲ್-ಫತಾ ನೌಜವಾನ್ ಸಮಿತಿ ಕಚೇರಿಯಲ್ಲಿ ಈದ್ ಮಿಲಾದ್ ಉನ್ ನಬಿಯನ್ನು ಅಧ್ಯಕ್ಷ ಜಮೀಲ್ ಅಹಮದ್ ಅಶ್ರಫಿ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ವಿವಿಧ ಮೊಹಲ್ಲಾದಲ್ಲಿ ಹಲವಾರು ಇಸ್ಲಾಮಿಕ್ ಪವಿತ್ರ ಕ್ಷೇತ್ರಗಳ ಮೆಕ್ಕಾ, ಮದೀನ ಮಾದರಿಯಲ್ಲಿ ಮಿಲಾದ್ ಸಮಿತಿಯ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಫೌಂಟನ್ ವೃತ್ತದಲ್ಲಿರುವ ಮಸೀದಿ ಅಕ್ಸಾ ಮಿಲಾದ್ ಕಮಿಟಿಯ ದೊಡ್ಡ ಸ್ತಬ್ಧಚಿತ್ರವು ಪ್ರಥಮ ಬಹುಮಾನ ಗಳಿಸಿತು.
ಮಸೀದಿ ಈದಿಗಾ ಮಿಲಾದ್ ಕಮಿಟಿ, ಮಸೀದಿ ಫೀಲ್ ಖಾನ್ ರಜಾ-ಇ-ಇತಾದ್ ಮಿಲಾದ್ ಕಮಿಟಿ, ರಹಮಾನಿಯಾ ಮಸೀದಿ ಮಿಲಾದ್ ಕಮಿಟಿ, ಫೋರ್ಟ್ ಮೊಹಲ್ಲಾ, ಉಮರ್ ಷಾ ಮಿಲಾದ್ ಕಮಿಟಿ, ಬಡಾ ಮಕಾನ್, ಬಿಲಾಲ್ ಮಿಲಾದ್ ಕಮಿಟಿ, ಉದಯಗಿರಿ, ಸರ್ವಾರ್ ಕೊನಿಯನ್ ಮಿಲಾದ್ ಕಮಿತಿ, 2ನೇ ಈದಿಗಾ ಮತ್ತು ಇತರೆ ಮಿಲಾದ್ ಕಮಿಟಿಗಳ ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಅಲ್-ಫತ್ ನೌಜವಾನ್ ಕಮಿಟಿ ಪದಾಧಿಕಾರಿಗಳಾದ ಅಲ್ತಾಫ್ ಅಹಮದ್, ಎಂ.ಡಿ. ಷರೀಫ್, ಸಜಾದ್ ಪಾಷ, ಜಮೀಲ್ ಅಹಮದ್ ಅಶ್ರಫಿ, ಇಸ್ಮಾಯಿಲ್ ಷರೀಫ್, ಸೈಯದ್ ಯೂಸುಫ್, ರಫೀಕ್ ಅಹಮದ್, ಅಬ್ದುಲ್ ಸತ್ತಾರ್, ಜಾಫರ್, ಪರ್ವೀಜ್ ಭಾಗವಹಿಸಿದ್ದರು.