ಉರುಸ್ ಕಾರ್ಯಕ್ರಮ
ಮೈಸೂರು: ನಗರದ ಮೇಟಗಳ್ಳಿಯ ಎಲೈಟ್ ಕೊಕೊನಟ್ ಪ್ರಾಡಕ್ಟ್ಸ್ನಲ್ಲಿ ಸಿಲ್ಸಿಲಾ ಅಲಿಯಾ ಖದರಿಯಾ ಜಾಂಗಿರಿಯಾ ಖುಶಾಲಿಯಾ ಸಂಘದ ಪದಾಧಿಕಾರಿಗಳು ಜಶ್ನೆ ಉರುಸ್ ಮಕ್ದೂಮ್ ಸಾಬಿರ್-ಎ-ಪಾಕ್ ಅನ್ನು ಮೊಹಮ್ಮದ್ ಕುಶಾಲಿ ಮಿಯನ್ ಅಧ್ಯಕ್ಷತೆಯಲ್ಲಿ ಆಚರಿಸಿತು. ಖುರಾನ್ ಪಠಣ ಮತ್ತು ನಾತ್-ಒ-ಪಾಕ್ ಕಾರ್ಯಕ್ರಮ ನಡೆಯಿತು. ಶ್ರೀರಂಗಪಟ್ಟಣದ ಜಾಮಿಯಾ ಟಿಪ್ಪು ಸುಲ್ತಾನ್ (ಅರೇಬಿಕ್ ಕಾಲೇಜು) ಪ್ರಾಂಶುಪಾಲ ಮುಫ್ತಿ ಸಜ್ಜದ್ ಹುಸೇನ್ ಖಾನ್ ಮಿಸ್ಪಾಹಿ ಅವರು ಪ್ರವಾದಿ ಹಜರತ್ ಮೊಹಮ್ಮದ್ ಜೀವನ ಚರಿತ್ರೆ ಬಗ್ಗೆ ಮತ್ತು ಅಜ್ಮತ್-ಇ-ಔಲಿಯಾ ಅಲ್ಲಾಹ ಬಗ್ಗೆ ಮಾತನಾಡಿದರು. ಖವ್ವಾಲ್ ಕಲಾವಿದ ಅತಾವುಲ್ಲ ಖಾದ್ರಿ ಮತ್ತು ತಂಡದವರು ನಾತ್ಖಾನಿ ಕಾರ್ಯಕ್ರಮ ನಡೆಯಿತು.