ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕುರುಬ ಜನಾಂಗದ ಅಭಿವೃದ್ಧಿಗೆ ಸಂಘಟಿತರಾಗಿ

Rashmi Kasaragodu
Updated On : 21 Jan 2014, 1:13 am

ಮೈಸೂರು: ಕುರುಬ ಜನಾಂಗದ ಅಭಿವೃದ್ಧಿಗೆ ನೌಕರರು ತಳಮಟ್ಟದಿಂದ ಸಂಘಟಿತರಾಗಬೇಕೆಂದು ನಗರಪಾಲಿಕೆ ಸದಸ್ಯ ಬಿ.ಎಂ. ನಟರಾಜ್ ಕರೆ ನೀಡಿದರು.
ಕುವೆಂಪುನಗರದಲ್ಲಿರುವ ಶ್ರೀ ಕಾಗಿನೆಲೆ ಕಾಲೇಜು ಆವರಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಶ್ರೀ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಕುರುಬರು ರಾಜ್ಯದಲ್ಲಿ 3ನೇ ಅತಿ ದೊಡ್ಡ ಜನಾಂಗವಾಗಿದ್ದರೂ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಇದರ ಆತ್ಮಾವಲೋಕನವನ್ನು ನೌಕರರು ಮಾಡಿಕೊಳ್ಳಬೇಕು. ಸಮಾಜವನ್ನು ಮುಖ್ಯವಾಹಿನಿಗೆ ತರಲು ಅಧಿಕಾರಿಗಳು ಶ್ರಮಿಸಬೇಕು. ಸಿದ್ದರಾಮಯ್ಯ ಅವರು ಈ ಜಿಲ್ಲೆಯಿಂದ ಮುಖ್ಯಮಂತ್ರಿಯಾಗಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದ್ದು, ಅವರ ಕೈ ಬಲಪಡಿಸುವಲ್ಲಿ ಅಧಿಕಾರಿಗಳು ಸಂಘಟಿತರಾಗಬೇಕೆಂದು ಹೇಳಿದರು.
ಡಾ.ಮಾಲೇಗೌಡ ಮಾತನಾಡಿ, ಸಮಾಜದ ನೌಕರರು ರಕ್ಷಣೆ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೊಡಿಸುವ ಬಗ್ಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುವ ಬಗ್ಗೆ ಸಂಘ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ತಾಪಂ ಅಧ್ಯಕ್ಷೆ ನಿರ್ಮಲಾ ಹೊನ್ನಪ್ಪ, ಜಿಂ ಸದಸ್ಯ ಜವರೇಗೌಡ, ಕೆಂಚಪ್ಪ, ನಾಗರಾಜು, ಚಂದ್ರೇಗೌ, ಭೀಮ್ರಾವ್, ಬಸವಣ್, ಗೋಪಿ, ಪ್ರಕಾಶ್, ಸುವರ್ಣದೇವಿ, ರಾಚೇಗೌಡ, ಕೆಂಚೇಗೌಡ, ಸುರೇಶ್, ಬಸವರಾಜು, ಬಿ. ಶಿವರಾಜೇಗೌಡ, ಕೆ.ಜೆ. ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement