ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜೆಡಿಎಸ್ ಸಂಘಟನೆಗೆ ಕಾರ್ಯಕರ್ತರು ಶ್ರಮಿಸಿ

Rashmi Kasaragodu
Updated On : 21 Jan 2014, 1:17 am

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಜೆಡಿಎಸ್ ಅನ್ನು ಸಂಘಟಿಸುವಂತೆ ಕರ್ನಾಟಕ ಪ್ರದೇಶ ಜನತಾದಳದ ಮೈಸೂರು ವೀಕ್ಷಕ ಹಾಗೂ ವಿಧಾನಪರಿಷತ್ ಮಾಜಿ ಸಭಾಪತಿ ಡೇವಿಡ್ ಸಿಮಿಯೋನ್ ಕಾರ್ಯಕರ್ತರಿಗೆ ಕರೆ ನೀಡಿದರು.
ಜೆಡಿಎಸ್ ನಗರ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಪಕ್ಷ ಸಂಘಟನಾ ಸಭೆಯಲ್ಲಿ ಭಾಗವಹಿಸಿದ್ದ ಅವರು, ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಬೇಕು. ಇದಕ್ಕಾಗಿ ಬೂತ್ ಮಟ್ಟದಲ್ಲಿ ಸಂಘಟನೆಗೆ ತೊಡಗಬೇಕು. ಅಲ್ಲದೆ ಈ ಬಾರಿ ಸತಾಯ ಗತಾಯ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆಲ್ಲಲು ಶ್ರಮಿಸಬೇಕು ಎಂದರು.
ಜನತಾದಳ ಬೆಂಬಲಿಸಿ ಅಧಿಕಾರಕ್ಕೆ ತರಬೇಕು. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯ ಸೇರಿದಂತೆ ಎಲ್ಲಾ ವರ್ಗಗಳಿಗೂ ಅಧಿಕಾರ ನೀಡುವಲ್ಲಿ ವರಿಷ್ಠರಾದ ಎಚ್.ಡಿ ದೇವಗೌಡರು ಶ್ರಮಿಸಿದ್ದಾರೆ. ಜೆಡಿಎಸ್ ನಡಿಗೆ ಪಾರ್ಲಿಮೆಂಟ್ ಕಡೆಗೆ ಎನ್ನುವ ಧ್ಯೇಯದೊಂದಿಗೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ವೀಕ್ಷಕರಾದ ಮಾಜಿ ಸಚಿವ ಜುಲ್ಪೀಕರ್ ಹಶ್ಮಿ, ಕಾರ್ಯದರ್ಶಿ ಬಸವರಾಜು, ಶಾಸಕರಾದ ಸಾ. ರಾ. ಮಹೇಶ್, ಎಸ್. ಚಿಕ್ಕಮಾದು, ಮೇಯರ್ ಎನ್.ಎಂ. ರಾಜೇಶ್ವರಿ, ಉಪಮೇಯರ್ ವಿ. ಶೈಲೇಂದ್ರ, ನಗರಪಾಲಿಕೆ ಸದಸ್ಯರಾದ ಸಂದೇಶ್ಸ್ವಾಮಿ, ಆರ್.ಲಿಂಗಪ್ಪ, ಕೆ.ವಿ. ಮಲ್ಲೇಶ್, ಕೆ.ಟಿ. ಚಲುವೇಗೌಡ, ಮಹದೇವಪ್ಪ, ಶಿವಣ್ಣ, ಎಂ.ಜೆ. ರವಿಕುಮಾರ್, ಬಾಲು, ನಟರಾಜು ಇದ್ದರು. ನಗರಾಧ್ಯಕ್ಷ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಫಾಲ್ಕನ್ ಬೋರೇಗೌಡ, ಎಂ.ಎನ್. ರಾಮು, ಪ್ರಭುಸ್ವಾಮಿ, ಎಂ. ಬಸವರಾಜು, ಚಂದ್ರೇಗೌಡ, ಮುದ್ದುರಾಜು ಇದ್ದರು.
ಆಕಾಂಕ್ಷಿಗಳಿಂದ ಅರ್ಜಿ: ನಗರದ ಎಲ್ಲಾ ಘಟಕಗಳ ಪದಾಧಿಕಾರಿಗಳ ಆಯ್ಕೆಗಾಗಿ ನಗರಾಧ್ಯಕ್ಷ ರಾಜಣ್ಣ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು.ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು. ವರಿಷ್ಠರು ಹಾಗೂ ಶಾಸಕರು ಮುಂತಾದ ಪ್ರಮುಖರೊಂದಿಗೆ ಸಮಾಲೋಚಿಸಿ ಆಯ್ಕೆ ಪ್ರಕಟಿಸಲಾಗುವುದು ಎಂದು ಮುಖಂಡರು ತಿಳಿಸಿದರು.  ಸಭೆಯಲ್ಲಿ ಶಾಸಕ ಸಾ.ರಾ ಮಹೇಶ್, ನಗರ ಪಾಲಿಕೆ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.




ಕ್ಯಾಲೆಂಡರ್ ಬಿಡುಗಡೆ
ಮೈಸೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಕೀಲರ ಕ್ಷೇಮಾಭಿವೃದ್ಧಿ ಸಂಘದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆಯಿತು. ಸಂಘದ ಅಧ್ಯಕ್ಷ ಸಿ. ಶೇಷಯ್ಯ ಅವರು ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶುಭ ಕೋರಿದರು. ಉಪಾಧ್ಯಕ್ಷ ಪುಟ್ಟಸ್ವಾಮಿ, ಕಾರ್ಯದರ್ಶಿ ತಿಮ್ಮಯ್ಯ, ಸಹ ಕಾರ್ಯದರ್ಶಿ ಎಲ್. ಚಂದ್ರಶೇಖರ್, ಖಜಾಂಚಿ ಎಸ್. ಮಹೇಶ್, ಸಂಘಟನಾ ಕಾರ್ಯದರ್ಶಿ ಎ.ಆರ್. ಕಾಂತರಾಜು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement