ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆ ಸಂಸದೆ ರಮ್ಯಾ ಪ್ರವಾಸ

Rashmi Kasaragodu
Updated On : 21 Jan 2014, 1:16 am

ಕೆ.ಆರ್. ನಗರ: ಸಂಸದೆ ರಮ್ಯಾ ಅವರು ಜ.22 ರಂದು ಕೆ.ಆರ್. ನಗರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಅವರ ಅಹವಾಲು ಆಲಿಸುವರು. ಅಂದು ಬೆಳಗ್ಗೆ 9.30ಕ್ಕೆ ತಮ್ಮ ಪ್ರವಾಸ ಆರಂಭಿಸಲಿರುವ ಅವರು, ಚೌಕಹಳ್ಳಿ, ಜೆಎಸ್ಎಸ್ ಮಹಿಳಾ ವಿದ್ಯಾರ್ಥಿನಿಲಯ, ಲಾಲನಹಳ್ಳಿ, ಬಸವರಾಜಪುರ, ಲಾಳಂದೇವನಹಳ್ಳಿ, ಹೊಸಹಳ್ಳಿ, ಮಾರ್ಚಹಳ್ಳಿ, ವಡ್ಡರಹಳ್ಳಿ, ಮೂಲೆಪೆಟ್ಲು, ಸಾತಿಗ್ರಾಮ, ಸೌತನಹಳ್ಳಿ, ಹೊಸೂರು ಕಲ್ಲಹಳ್ಳಿ, ಬೋರೆಕಲ್ಲಹಳ್ಳಿ, ಕಾಮೇನಹಳ್ಳಿ, ನಾರಾಯಣಪುರ, ಕಗ್ಗೆರೆ, ಹಂಪಾಪುರ, ದೊಡ್ಡಕೊಪ್ಪಲು, ಗಳಿಗೆಕೆರೆ, ಅಡಗೂರು, ಮಾರಗೌಡನಹಳ್ಳಿ, ಅರ್ಜುನಹಳ್ಳಿ, ಕಲ್ಯಾಣಪುರ, ಬಡಕನಕೊಪ್ಪಲು ಗ್ರಾಮಗಳಿಗೆ ಭೇಟಿ ನೀಡುವರ ಎಂದು ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಮತ್ತು ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement