ಸ್ಮಾರಕಗಳ ಮುಂಭಾಗ ಪಾರಂಪರಿಕ ನಡಿಗೆ
ಮೈಸೂರು: ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮೈಸೂರು ಘಟಕವು ರಾಯಲ್ ಮೈಸೂರು ವಾಕ್ಸ್ ಸಂಸ್ಥೆಯ ಜತೆಗೂಡಿ ಭಾನುವಾರ ನಗರದ ಸ್ಮಾರಕಗಳ ಮುಂಭಾಗ ಪಾರಂಪರಿಕ ನಡಿಗೆ ಹಮ್ಮಿಕೊಂಡಿತ್ತು.
ಪುರಭವನದಿಂದ ಆರಂಭವಾದ ನಡಿಗೆಯು ನಗರದ ಪ್ರಮುಖ ಸ್ಮಾರಕಗಳು, ಪಾರಂಪರಿಕ ಕಟ್ಟಡಗಳಿರುವ ಕಡೆ ಸುತ್ತಾಡಿ ಪುನಃ ಪುರಭವನದಲ್ಲಿ ಅಂತ್ಯಗೊಂಡಿತು. ಮೈಸೂರು ಪ್ರತಿಯೊಬ್ಬರಿಗೂ ಇಷ್ಟವಾಗುವ ಊರು. ಅರಮನೆಗಳು, ಸುಂದರ ಕಟ್ಟಡಗಳು, ಮರಗಿಡಗಳು, ಕಲಾವಂತಿಕೆಯ ತವರೂರು. ಇತ್ಯಾದಿ ವಿಷಯಗಳ ಬಗ್ಗೆ ನಡಿಗೆಯ ಸಾರಥ್ಯ ವಹಿಸಿದ್ದ ಸಿಐಐ ಉಪಾಧ್ಯಕ್ಷ ಆರ್.ಸಿ. ಜಗದೀಶ್ ಪ್ರವಾಸಿಗರು, ನಗರವಾಸಿಗಳಿಗೆ ತಿಳಿಸಿಕೊಟ್ಟರು. ರಾಯಲ್ ಮೈಸೂರು ವಾಕ್ಸ್ನ ವಿನಯ್ ನಾಗರಾಜು, ವಿಶ್ವಾಸ್ ಕೃಷ್ಣ, ಪ್ರೀತಿ ಅನಂತ ನರಸಿಂಹನ್, ಅಶ್ವಿನಿಪ್ರಸಾದ್, ವಿದ್ಯಾಶ್ರೀ ನಾಗರಾಜು, ಅನಂತ ಜಯರಾಮ್, ನಿಹಾರಿಕಾ ಹುಬ್ಬಳ್ಳಿ ಇದ್ದರು.