ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಡಾನೆ ಭೀತಿ ಬಿಡಿ: ಅರಣ್ಯಾಧಿಕಾರಿ ಅಭಯ

Rashmi Kasaragodu
Updated On : 22 Jan 2014, 1:31 am

ಸರಗೂರು: ಸಮೀಪದ ಹಂಚೀಪುರ ಗ್ರಾಮದಲ್ಲಿ ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದ ಹಿನ್ನೆಲೆಯಲ್ಲಿ ವಲಯ ಅರಣ್ಯ ಅಧಿಕಾರಿ ಶಂಕರೇಗೌಡ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು.
ಕಾಡಾನೆಗಳು ಹಾಡು ಹಗಲೇ ಗ್ರಾಮಕ್ಕೆ ನುಗ್ಗುತ್ತಿವೆ, ಬೆಳೆದ ಫಸಲೆಲ್ಲ ಕಾಡಾನೆ ಪಾಲಾಗುತ್ತಿದೆ. ಗ್ರಾಮಗಳಿಂದ ಸರಗೂರಿಗೆ ಬೆಳಿಗ್ಗೆ ಸಂಜೆ ತಿರುಗಾಡಲು ಶಾಲಾ ಮಕ್ಕಳು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಡೆಗಟ್ಟಬೇಕು. ಬೆಳೆ ಹಾನಿಗೆ ಪರಿಹಾರ ನೀಡಬೇಕು ಎಂದು ಗ್ರಾಮದ ಮುಖಂಡ ಗಣಪತಿ ತಿಳಿಸಿದರು.  ವಲಯ ಅರಣ್ಯ ಅಧಿಕಾರಿ ಶಂಕರೇಗೌಡ ಮಾತನಾಡಿ, ಕಾಡಾನೆಗಳನ್ನು ಕಾಡಿಗೆ ಓಡಿಸಲು ಇಂದಿನಿಂದಲೆ ಕೆಲಸ ಮಾಡಲಾಗುತ್ತದೆ. ನಮ್ಮ ಸಿಬ್ಬಂದಿಯನ್ನು ರಾತ್ರಿ ಗಸ್ತಿನಲ್ಲಿ ಕೆಲಸ ಮಾಡಿಸಲಾಗುತ್ತದೆ. ರೈತರು ಸಹಕರಿಸಬೇಕೆಂದು ಕೋರಿದರು.
ತಾ. ವೀರಶೈವ ಸಮಾಜದ ಅಧ್ಯಕ್ಷ ಮಹದೇವಪ್ಪ, ರೈತ ಮುಖಂಡ ಗಣಪತಿ, ಆನಂದ, ನಟರಾಜ, ಮಣಿಕುಮಾರ್, ಸರಗೂರು ಠಾಣೆ ಎಎಸ್ಐ ಚಲುವಾಚಾರಿ, ಪೇದೆ ಭಾಸ್ಕರ್, ಆನಂದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement