ಕೃಷಿ ಕಾರ್ಯಕ್ರಮ ಸದುಪಯೋಗವಾಗಲಿ
ಬೈಲುಕುಪ್ಪೆ: ಐಟಿಸಿ ಕಂಪನಿ ಕೃಷಿಗೆ ಪೂರಕವಾದ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಮೈಸೂರು ವಿಭಾಗದ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮುಖ್ಯಸ್ಥ ರಾಜೀವ್ ತಿಳಿಸಿದರು. ಐಟಿಸಿ ಸಂಸ್ಥೆಯ ಎಂಎಸ್ಕೆ ಕಾರ್ಯಕ್ರಮದಡಿ ಹಾಗೂ ಪಶು ಆಸ್ಪತ್ರೆ ಪಿರಿಯಾಪಟ್ಟಣ ಸಹಯೋಗದೊಂದಿಗೆ ಮಿಶ್ರ ತಳಿ ಹಾಗೂ ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಣಗಾಲು ಪಶುವೈದ್ಯ ಇಲಾಖೆ ಡಾ. ಚಾಮರಾಜ್ ಮಾತನಾಡಿ, ಲಾಭದಾಯಕ ಹೈನುಗಾರಿಕೆ ಕರು ಸಾಕಾಣೆ ಮತ್ತು ಮೇವಿನ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಸಭೆ ಅಧ್ಯಕ್ಷತೆ ವಹಿಸಿದ್ದ ಹಲಗನಹಳ್ಳಿ ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ ನಾರಾಯಣಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸುಮಾರು 250ಕ್ಕೂ ಹೆಚ್ಚು ಮಿಶ್ರ ತಳಿ ಹಸು ಮತ್ತು ಕರು ಭಾಗವಹಿಸಿದ್ದವು. ತೀರ್ಪುಗಾರರಾಗಿ ಡಾ. ಚಾಮರಾಜ್, ಸಂದೇಶ್ ಭಾಗವಹಿಸಿದ್ದರು. ಗ್ರಾಪಂ ಸದಸ್ಯ ನಟೇಶ್, ಪಶು ಇಲಾಖೆ ಸಿಬ್ಬಂದಿ ನಾರಾಯಣ, ರಮೇಶ್ ಇದ್ದರು.