ಗ್ರೀನ್ ಬಡ್ಸ್ ಸಂಸ್ಥೆ ವಿರುದ್ಧ ಗ್ರಾಹಕರ ಪ್ರತಿಭಟನೆ
ಮೈಸೂರು: ಗ್ರೀನ್ ಬಡ್ಸ್ ಆಗ್ರೋ ಫಾರಂ ಸಂಸ್ಥೆಯಿಂದ ಸಾವಿರಾರು ಜನರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಸಂಸ್ಥೆಯ ಗ್ರಾಹಕರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರನಾಥ್, ಮುಖ್ಯ ವ್ಯವಸ್ಥಾಪಕಿ ಗಾಯತ್ರಿ ಅವರು ಏಜೆಂಟರು ಗ್ರಾಹಕರಿಂದ ಸಂಗ್ರಹಿಸಿಕೊಟ್ಟಿರುವ ಕೋಟ್ಯಂತರ ರು. ದುರುಪಯೋಗ ಮಾಡಿಕೊಂಡಿದ್ದಾರೆ. ಈ ಸಂಬಂಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಕೆಲವು ಪೊಲೀಸ್ ಅಧಿಕಾರಿಗಳು ಸಂಸ್ಥೆಯವರ ಕೈಗೊಂಬೆಯಾಗಿದ್ದಾರೆ ಎಂದು ಅವರು ದೂರಿದರು.
ಜಿಲ್ಲಾಧಿಕಾರಿಯವರು ಈ ಸಂಸ್ಥೆಯ ವಿರುದ್ಧ ಕ್ರಮ ಕೈಗೊಂಡು, ನೊಂದ ಗ್ರಾಹಕರಿಗೆ ಪರಿಹಾರ ಕೊಡಿಸಬೇಕು ಎಂದು ಅವರು ಒತ್ತಾಯಿಸಿದರು.
ದಸಂಸ ಮುಖಂಡ ರಾಮಚಂದ್ರಯ್ಯ, ಗ್ರಾಹಕರಾದ ಮಹದೇವೇಗೌಡ, ಅನ್ನಪೂರ್ಣ, ನಿರ್ಮಲಾ, ಎನ್. ರೂಪಾ, ಸುನಿತಾ, ಶೋಭಾ ಇದ್ದರು.