ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತರಬೇತಿ ಸದುಪಯೋಗಕ್ಕೆ ಕರೆ

Rashmi Kasaragodu
Updated On : 22 Jan 2014, 1:32 am

ಎಚ್.ಡಿ. ಕೋಟೆ: ವಿವಿಧ ಹಳ್ಳಿಗಳಿಂದ ನವೋದಯ ತರಬೇತಿಗೆ ಆಗಮಿಸಿರುವ ಎಲ್ಲ ಮಕ್ಕಳು ಶ್ರದ್ಧೆಯಿಂದ ತರಬೇತಿ ಪಡೆದು ಉತ್ತೀರ್ಣರಾಗಿ ತಾಲೂಕಿಗೆ ಉತ್ತಮ ಹೆಸರು ತರಬೇಕು ಎಂದು ಜಿಪಂ ಸದಸ್ಯೆ ನಂದಿನಿ ಚಂದ್ರಶೇಖರ್ ತಿಳಿಸಿದರು. ಪಟ್ಟಣದ ಕಸ್ತೂರಿ ಸಂಸ್ಥೆ ಆರಂಭಿಸಿರುವ ನವೋದಯದ ಉಚಿತ ತರಬೇತಿ ತರಗತಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿ ಕ್ಷೇತ್ರದಲ್ಲೂ ಹಣ ಗಳಿಕೆಯನ್ನೆ ಧ್ಯೇಯವನ್ನಾಗಿ ಮಾಡಿಕೊಂಡಿರುವ ಇಂದಿನ ಭೋಗ ಪ್ರಪಂಚದಲ್ಲಿ ಉಚಿತವಾಗಿ ಅದರಲ್ಲೂ ನವೋದಯ ತರಬೇತಿ ನೀಡಲು ಮುಂದೆ ಬಂದಿರುವ ಕಸ್ತೂರಿ ಸಂಸ್ಥೆಯ ಸೇವೆ ಶ್ಲಾಘನೀಯ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು. ಕಸ್ತೂರಿ ಸಂಸ್ಥೆಯ ಅಧ್ಯಕ್ಷ ಸಿ.ಎಸ್. ಕುಮಾರಸ್ವಾಮಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ವಿ. ರಾಘವೇಂದ್ರಸ್ವಾಮಿ, ಸತೀಶ್, ರವಿಶಂಕರ್, ಎ.ಸಿ. ಮಂಜುನಾಥ್, ನಾಗೇಶ್, ಸ್ವಾಮಿ, ಮಹದೇವ್, ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement