ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗರ್ಭಿಣಿ ಮೇಲೆ ಹಲ್ಲೆ ಪ್ರಕರಣ; ಆರೋಪಿಗಳ ಬಂಧನಕ್ಕೆ ಆಗ್ರಹ

Rashmi Kasaragodu
Updated On : 23 Jan 2014, 1:39 am

ಟಿ. ನರಸೀಪುರ: ಗರ್ಭಿಣಿ ಮೇಲೆ ಹಲ್ಲೆ ಮಾಡಿ, ಆಕೆಗೆ ಗರ್ಭಪಾತವಾಗಲು ಕಾರಣರಾದ ನಾಲ್ವರು ಆರೋಪಿಗಳನ್ನು ಮೂರು ತಿಂಗಳಾದರೂ ಪೊಲೀಸರು ಬಂಧಿಸಿಲ್ಲ. ಕೂಡಲೇ ನಾಲ್ವರು ಆರೋಪಿಗಳನ್ನು ಬಂಧಿಸಿ ನಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕೆಂದು ಪತಿ ಮಹೇಶ್ ಮನವಿ ಮಾಡಿದ್ದಾರೆ.
ತಾಲೂಕಿನ ವಾಟಾಳು ಗ್ರಾಮದ ಮಹೇಶ್ ಎಂಬವರ ಪತ್ನಿ ವಾಣಿ(23) ಎಂಬವರ ಮೇಲೆ ಅದೇ ಗ್ರಾಮದ ಲೇಟ್ ಮಲ್ಲಪ್ಪ ಎಂಬವರ ಪುತ್ರರಾದ ಲೋಕೇಶ್ ಮತ್ತು ಮಲ್ಲೇಶ್, ಯೋಗೇಶ ಹಾಗೂ ನಂದೀಶ ಎಂಬವರ ಜೊತೆಗೂಡಿ ಕಳೆದ 2013ರ ನ.14ರಂದು ಹಲ್ಲೆ ಮಾಡಿ ಪರಾರಿಯಾಗಿದ್ದರು.
ಹಲ್ಲೆಯಿಂದ ವಾಣಿಗೆ ಗರ್ಭಪಾತವಾಗಿತ್ತು. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಾಲ್ವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಇದುವರೆವಿಗೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ. ಮಹಿಳೆಯೊಬ್ಬಳ ಗರ್ಭಪಾತಕ್ಕೆ ಕಾರಣಕರ್ತರಾದ ಆರೋಪಿಗಳು ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಹಳ್ಳಿಗಳಲ್ಲಿಯೇ ಅಡ್ಡಾಡುತ್ತಿದ್ದಾರೆ: ಗರ್ಭಿಣಿ ಪತ್ನಿಯ ಮೇಲೆ ಹಲ್ಲೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿಗಳೆಲ್ಲರೂ ದೇವರ ಹೆಸರಿನಲ್ಲಿ ದವಸ ಧಾನ್ಯಗಳನ್ನು ಸಂಗ್ರಹಿಸಲು ನೆರೆಹೊರೆಯ ಹಳ್ಳಿಗಳಲ್ಲಿಯೇ ಓಡಾಡುತ್ತಿದ್ದಾರೆ ಎಂದು ವಾಣಿ ಅವರ ಪತಿ ಮಹೇಶ್ ದೂರಿದ್ದಾರೆ.
ಪತ್ನಿ ವಾಣಿ ಅವರನ್ನು ಪ್ರತಿನಿತ್ಯ ಚುಡಾಯಿಸುತ್ತಿದ್ದ ಮೊದಲ ಆರೋಪಿ ಲೋಕೇಶನ ವರ್ತನೆಯನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ಮಲ್ಲೇಶ್, ಯೋಗೇಶ ಹಾಗೂ ನಂದೀಶ ಅವರು ಮನೆಗೆ ನುಗ್ಗಿ ಹಲ್ಲೇ ಮಾಡಿದ್ದರು. ಘಟನೆಯಲ್ಲಿ ಮಡದಿ ಕೆಳಕ್ಕೆ ಬಿದ್ದರೂ ಲೆಕ್ಕಿಸದೇ ಕಾಲಿನಿಂದ ಹೊಟ್ಟೆ ಮೇಲೆ ತುಳಿದ ಪರಿಣಾಮ ಗರ್ಭಪಾತವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement