ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜೆಎಸ್ಎಸ್ ಶಾಲೆಯ ವಾರ್ಷಿಕೋತ್ಸವ

Rashmi Kasaragodu
Updated On : 23 Jan 2014, 1:41 am

ಮೈಸೂರು: ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವವನ್ನು ಬುಧವಾರ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ದಕ್ಷಿಣ ವಲಯ ಬಿಇಒ ಬಿ.ಎನ್. ಶಿವರಾಮೇಗೌಡ ಮಾತನಾಡಿ, ಜೆಎಸ್ಎಸ್ ಸಂಸ್ಥೆಯ ಕಾರ್ಯವೈಖರಿ ಸಮಾಜಕ್ಕೆ ಮಾದರಿಯಾಗಿದೆ. ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿರುವ ಈ ಶಾಲೆಯ ವಿದ್ಯಾರ್ಥಿಗಳಾದ ನೀವೇ ನಿಜವಾದ ಭಾಗ್ಯಶಾಲಿಗಳು. ನೀವು ಮುಂದೆ ಚೆನ್ನಾಗಿ ಕಲಿತು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗದ ನಿರ್ದೇಶಕ ಕೆ. ಶಾಂತಯ್ಯ, ವಿದ್ಯಾರ್ಥಿಗಳು ತಮ್ಮದೇ ಆದ ಶಿಸ್ತನ್ನು ರೂಢಿಸಿಕೊಂಡು ಬಂದವರಾಗಿದ್ದು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿನ ತಮ್ಮ ಜಾಣ್ಮೆ ನನಗೆ ಬಹಳ ಸಂತೋಷ ತಂದಿದೆ. ಮುಂದೆಯೂ ಸಹ ತಾವೆಲ್ಲರೂ ತಮ್ಮ ಮುಖ್ಯೋಪಾಧ್ಯಾಯರ ಮಾರ್ಗದರ್ಶನದಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರೊಂದಿಗೆ ತಮ್ಮ ತಂದೆ, ತಾಯಿ ಹಾಗೂ ಶಾಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಕಿವಿಮಾತು ಹೇಳಿದರು.
ಜೆಎಸ್ಎಸ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಪಿ. ಉಮಾದೇವಿ ಶಾಲಾ ಸಂಚಿಕೆ ನವಜ್ಯೋತಿಯನ್ನು ಬಿಡುಗಡೆಗೊಳಿಸಿದರು. ಸಂಪಾದಕಿ ಯು.ಎಂ. ಗೌರಮ್ಮ ಅತಿಥಿಯಾಗಿ ಭಾಗವಹಿಸಿದ್ದರು. ಉಲುಚಿ ಪಿ. ರಾವ್ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಕೆ.ಎಸ್. ಗೌರಿಶಂಕರಸ್ವಾಮಿ ಸ್ವಾಗತಿಸಿದರು. ವಿ.ಆರ್. ಪಂಚಮಿ ನಿರೂಪಿಸಿದರು. ಶರಯು ಆರ್. ಸಿದ್ಧಾಂತಿ ವಂದಿಸಿದರು.

'ಬೆಳವಾಡಿ ಅಭಿವೃದ್ಧಿಗೆ ಕ್ರಮ'

ಮೈಸೂರು: ನಗರಕ್ಕೆ ಹೊಂದಿಕೊಂಡಂತೆ ಇರುವ ಬೆಳವಾಡಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳುವುದಾಗಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಬೆಳವಾಡಿ ಗ್ರಾಮದ ವಿವಿಧ ಬಡಾವಣೆಗೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಕುಂದುಕೊರತೆ ಆಲಿಸಿ, ಗ್ರಾಮದ ಅಭಿವೃದ್ಧಿಗೆ ಸೂಕ್ತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬೆಳವಾಡಿ ಗ್ರಾಮ ನಗರಕ್ಕೆ ಹೊಂದಿಕೊಂಡಂತೆ ಇದ್ದು, ಎಂಡಿಎ ವತಿಯಿಂದ ಈಗಾಗಲೇ ಯುಜಿಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಇದಕ್ಕೂ ಮುನ್ನ 167 ಲಕ್ಷ ವೆಚ್ಚದಲ್ಲಿ ವಿಜಯನಗರ 4ನೇ ಹಂತ, 3ನೇ ಘಟ್ಟದ ಮಹಿಳಾ ಕಾಲೇಜಿನ ರಸ್ತೆ ಅಗಲೀಕರಣ ಕಾಮಗಾರಿಗೆ ಹಾಗೂ 39.45 ಲಕ್ಷ ವೆಚ್ಚದಲ್ಲಿ ವಿಜಯನಗರ 4ನೇ ಹಂತದ 3ನೇ ಘಟ್ಟ ಬಡಾವಣೆಯಿಂದ ಬೆಳವಾಡಿ ಗ್ರಾಮಕ್ಕೆ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಿದರು.
ಪೌರ ಕಾರ್ಮಿಕರ ಕಾಲೋನಿಯ ಬನ್ನಾರಿ ಅಮ್ಮನವರ ದೇವಸ್ಥಾನದ ಶಂಕುಸ್ಥಾಪನೆ ನೆರವೇರಿಸಿ, ಕಾಲೋನಿಗೆ ಯುಜಿಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವುದಾಗಿ ಹೇಳಿದರು. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದರು.
ಗ್ರಾಮದ ಬಸವೇಶ್ವರ ದೇವಸ್ಥಾನದ ಮುಂದೆ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಪಿಂಚಣಿದಾರರಿಗೆ ಪಿಂಚಣಿ ವತರಿಸಿ, ಉಳಿದವರಿಗೆ ಜ.31ರೊಳಗೆ ಪಿಂಚಣಿ ವಿತರಿಸುವಂತೆ ಉಪ ತಹಸೀಲ್ದಾರ್ಗೆ ಸೂಚಿಸಿದರು.
ಜಿಪಂ ಸದಸ್ಯೆ ಭಾಗ್ಯ ಶಿವಮೂರ್ತಿ, ಶಿವಮೂರ್ತಿ, ರಾಮಚಂದ್ರ, ರಮೇಶ್, ಬೊರಪ್ಪ, ಜಿಪಂ ಮಾಜಿ ಅಧ್ಯಕ್ಷ ಕಡಕೊಳ ನಾಗರಾಜ್, ಎಂ.ಪಿ. ನಾಗರಾಜು, ಮುಖಂಡರಾದ ಸಿದ್ದೇಗೌಡ, ಎಪಿಎಂಸಿ ಸದಸ್ಯ ನಾಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement