ತಾಂಡವಪುರ; ಹುಲ್ಲಿನ ಮೆದೆ ಭಸ್ಮ
ತಾಂಡವಪುರ: ಹುಲ್ಲಿನ ಮೆದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಭಸ್ಮವಾಗಿರುವ ಘಟನೆ ಮಂಗಳವಾರ ಮಧ್ಯರಾತ್ರಿ ಗ್ರಾಮದಲ್ಲಿ ಜರುಗಿದೆ. ಪುಟ್ಟೇಗೌಡ ಎಂಬವವರಿಗೆ ಸೇರಿದ ಈ ಹುಲ್ಲಿನ ಮೆದೆಗೆ ಬೆಂಕಿ ತಗುಲಿದಾಗ ಸಾರ್ವಜನಿಕರು ಹಾಗೂ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಿದ್ದರಿಂದ ಅಕ್ಕಪಕ್ಕದಲ್ಲಿದ್ದ ವಾಸದ ಮನೆಗಳಿಗೂ ಬೆಂಕಿ ವ್ಯಾಪಿಸುವುದನ್ನು ತಡೆದು, ಹೆಚ್ಚಿನ ಅನಾಹುತ ತಪ್ಪಿಸಿದರು. ಜಿಪಂ ಸದಸ್ಯೆ ರೇವಮ್ಮ ಟಿ.ಕೆ. ಮಾಲೇಗೌಡ, ಗ್ರಾಮ ಲೆಕ್ಕಾಧಿಕಾರಿ ಕುಟ್ಟಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಿಕೊಡುವ ಭರವಸೆ ನೀಡಿದರು.