ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಿ'

Rashmi Kasaragodu
Updated On : 23 Jan 2014, 1:40 am

ರಾವಂದೂರು: ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಶರಣರ ತತ್ವಗಳು ಪ್ರಸ್ತುತವಾದವು ಎಂದು ಉಪನ್ಯಾಸಕ ಕೊಡಿಯಾಲ ಶಿವಕುಮಾರ್ ಹೇಳಿದರು.
209ನೇ ಶರಣರ ಮಾಸಿಕ ಶರಣರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. 820 ವರ್ಷಗಳ ನಂತರ ವಚನಕಾರ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸುತ್ತಿರುವುದು ಸಂತಸ ತಂದಿದೆ. ಮಹಾತ್ಮರನ್ನು, ಶರಣರನ್ನು ಅವರ ಸಾಧನೆಗಳನ್ನು ನೆನೆಯುವುದರ ಮೂಲಕ ಅವರ ಆದರ್ಶ ಮಾರ್ಗದಲ್ಲಿ ನಡೆಯವುಂತೆ ಸಮಾಜವನ್ನು ಪ್ರೇರೇಪಿಸಬೇಕಿದೆ ಎಂದು ತಿಳಿಸಿದರು.
ಸಿದ್ದರಾಮೇಶ್ವರರು 68 ಸಾವಿರ ವಚನಗಳನ್ನು ರಚಿಸಿದ್ದು, ಪ್ರಸ್ತುತ 2 ಸಾವಿರ ವಚನಗಳು ಮಾತ್ರ ಲಭ್ಯವಿದೆ. ಇವರು ಶೂನ್ಯ ಪೀಠದ 3ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಶಾಲೆ, ಗೋಶಾಲೆ, ಸಾಮೂಹಿಕ ವಿವಾಹ, ಕೆರೆಕಟ್ಟೆಗಳ ನಿರ್ಮಾಣ ಮುಂದಾಗಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಿದರು ಎಂದು ಅವರು ಹೇಳಿದರು.
ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಸಿದ್ದರಾಮೇಶ್ವರರ ತತ್ವಗಳು ಜನರ ನೆಮ್ಮದಿಯ ಜೀವನಕ್ಕೆ ಹತ್ತಿರವಾಗಿದ್ದು, ಇವುಗಳನ್ನು ಅನುಸರಿಸಿ ನಡೆಯಬೇಕು ಎಂದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು. ಇತ್ತೀಚೆಗೆ ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟ ಮಲ್ಲಿಕಾರ್ಜುನ ಬಂಡೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶರಣ ಸರ್ವೆ ರಾಜಣ್ಣ, ಆರ್.ಎಸ್. ಮಹೇಶ್, ಆರ್.ಟಿ. ಸತೀಶ್, ತಾರಾ, ಲಲಿತ, ಸರ್ವಮ್ಮ, ರಘು ಸ್ವಾಮಿ ಇದ್ದರು.


ಮಿರ್ಲೆಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ


ಭೇರ್ಯ: ಕೆ.ಆರ್. ನಗರ ತಾಲೂಕು ಮಿರ್ಲೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಕಾನೂನು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಕೀಲ ನೂತನ್ಕುಮಾರ್ ಮಾತನಾಡಿ, ಕಾನೂನು ಅರಿವಿಲ್ಲದಿದ್ದರೆ ಸಮಸ್ಯೆಗೊಳಗಾಗುವ ಸಾಧ್ಯತೆ ಹೆಚ್ಚು. ಪ್ರತಿಯೊಬ್ಬರೂ ಕಾನೂನು ಬಗ್ಗೆ ತಿಳಿವಳಿಕೆ ಹೊಂದಬೇಕಿದೆ. ಮಹಿಳೆಯರ ಸಂರಕ್ಷಣೆಗೆ ಜಾರಿಯಲ್ಲಿರುವ ಕಾನೂನು, ವಿಚ್ಛೇದನ, ಜೀವನಾಂಶ, ಆಸ್ತಿಹಕ್ಕು ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ವಕೀಲರಾದ ಪ್ರಭಾವತಿ, ಮನೋಹರ್, ಜ್ಞಾನಮೂರ್ತಿ, ತಾಲೂಕು ಯೋಜನಾಧಿಕಾರಿ ಬಿ. ಅಶೋಕ್,  ಸಂಸ್ಥೆಯ ಸೇವಾಪ್ರತಿನಿಧಿಗಳಾದ ನೇತ್ರಾವತಿಕುಮಾರ್, ಶಾರದಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement