'ರೋಗ ನಿವಾರಣೆಗೆ ಯೋಗ ಸಹಕಾರಿ'
ಕೆ.ಆರ್. ನಗರ: ಯೋಗ್ಯವಾದುದ್ದನ್ನು ಗಮನವಿಟ್ಟು ಮಾಡುವುದೇ ಯೋಗವಾಗಿದ್ದು, ದೇಹದ ದೀರ್ಘಕಾಲದ ವ್ಯಾಧಿ ಹಾಗೂ ಮಾನಸಿಕ ಅಸ್ವಸ್ಥತೆಗೆ ಸರಳ ಸಮೃದ್ಧಿ ಯೋಗ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅಂತಾರಾಷ್ಟ್ರೀಯ ಯೋಗಪಟು ಮಾದೇಗೌಡ ಕರೆ ನೀಡಿದರು.
ಪಟ್ಟಣದ ವಾಸವಿ ಮಹಲ್ನಲ್ಲಿ ಪತಂಜಲಿ ಯೋಗಾಶ್ರವು ಟ್ರಸ್ಟ್, ಆರ್ಯ ವೈಶ್ಯ ಮಂಡಳಿ ಮತ್ತು ವಾಸವಿ ಯುವಜನ ಸಂಘಗಳ ಸಂಯುಕ್ತಾಶ್ರಯದಲ್ಲಿ ನಡೆದ 13 ದಿನಗಳ ಕಾಲ ಸರಳ ಸಮೃದ್ಧಿ ಯೋಗ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ದೇಹವೆಂಬ ದೇಗುಲದಲ್ಲಿ ಜೀವಾತ್ಮವಿದ್ದು, ಇದನ್ನು ಪರಮಾತ್ಮನ ಬಳಿಗೆ ಕೊಂಡೊಯ್ಯುವ ಸನ್ಮಾರ್ಗವೇ ಪ್ರಕೃತಿದತ್ತವಾದ ಯೋಗ. ಆರೋಗ್ಯ ಕಾಪಾಡಿಕೊಂಡು ನಿರಂತರ ಒತ್ತಡದಿಂದ ಮನಸ್ಸನ್ನು ಮುಕ್ತಿಗೊಳಿಸಿ ಉಲ್ಲಾಸದಿಂದ ಇರಬೇಕಾದರೆ ಯೋಗಾಸನ ಅತ್ಯವಶ್ಯ ಎಂದು ಹೇಳಿದರು.
ಪತಂಜಲಿ ಯೋಗಾಶ್ರವು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಗುರೂಜಿ ಪ್ರಕಾಶ್ಯೋಗಿ, ತಾ. ಅಧ್ಯಕ್ಷ ಡಾ. ಶಿವನಂಜಪ್ಪ ಮಾತನಾಡಿದರು. ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಶಂಕರನಾರಾಯಣಶೆಟ್ಟಿ, ವಾಸವಿ ಯುವಜನ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ರಾಮಾನುಜಂ, ಕೋಮಲ ಶಿವನಂಜಪ್ಪ, ಡಾ. ಶಿವಪ್ರಸಾದ್, ಡಾ. ನಟರಾಜ್, ರಾಮೇಗೌಡ, ಯೋಗಾಚಾರ್ಯರಾದ ಮುದ್ದುಕೃಷ್ಣ, ಪಿ.ಆರ್. ವಿಶ್ವನಾಥಶೆಟ್ಟಿ, ರೇವಣ್ಣಗೌಡ, ಸೋಮಶೇಖರ್, ಭದ್ರಪ್ಪ, ಮಹದೇವ್ ರಾವ್, ರೇವಣ್ಣ, ಪದ್ಮಾವತಿ, ರಾಮಪ್ಪ, ಪ್ರವೀಳಾ ರೇವಣ್ಣ, ಸ್ಪಿನ್ ಕೃಷ್ಣ, ಶಿಬಿರದ ಸಂಯೋಜಕ ಜಗದೀಶ್ ಇದ್ದರು.