ವೈವಿಧ್ಯತೆ ಅರಿಯಲು ಸಾಂಸ್ಕೃತಿಕ ವಿನಿಮಯ ಸಹಕಾರಿ: ಸತ್ಯಪ್ರಸಾದ್
ಮೈಸೂರು: ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಿಂದ ದೇಶ- ವಿದೇಶದ ಸಂಸ್ಕೃತಿ ಮತ್ತು ವೈವಿಧ್ಯತೆ ಅರಿಯಲು ಸಾಧ್ಯ ಎಂದು ವಿಜಯ ವಿಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಹೇಳಿದರು.
ವಿಜಯ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ದಕ್ಷಿಣ ಕೊರಿಯಾ ವಿದ್ಯಾರ್ಥಿಗಳೊಡನೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಕ್ಷಿಣ ಕೊರಿಯಾ ವಿದ್ಯಾರ್ಥಿಗಳು ತಮ್ಮ ದೇಶದ ಸಂಸ್ಕೃತಿ ಬಿಂಬಿಸುವ ಬೀಸಣಿಗೆ ನೃತ್ಯ, ಆಕ್ಷನ್ ನೃತ್ಯ ಮತ್ತು ಜಾನಪದ ನೃತ್ಯ ಪ್ರದರ್ಶಿಸಿದರು. ವಿಜಯ ವಿಠಲ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ಞಾ, ಹರ್ಷಿತಾ, ಕಾರ್ತಿಕ್, ಸೌಪರ್ಣಿಕಾ ಅವರು ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಜಾನಪದ ಗೀತೆ, ನೃತ್ಯ ಮತ್ತು ಕಿರುನಾಟಕ ಪ್ರದರ್ಶಿಸಿದರು.
ವಿದ್ಯಾರ್ಥಿಗಳಾದ ಸುಕೃತ, ವರ್ಷ ಮತ್ತು ಶ್ರೀಲಕ್ಷ್ಮಿ ಅವರು ಭಾರತೀಯ ಸಂಸ್ಕೃತಿ, ಕರ್ನಾಟಕದ ಹಿರಿಮೆ ಮತ್ತು ಮೈಸೂರಿನ ಪ್ರಾಮುಖ್ಯತೆ ಕುರಿತು ಮಾತನಾಡಿದರು. ಉಪನ್ಯಾಸಕ ಪ್ರದೀಪ್, ವೈಶಾಲಿ, ಸಂಚಾಲಕ ವಿಜಯ್ ಇದ್ದರು.