ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹೆಬ್ಬೂರು ಗೇಟ್ ರಸ್ತೆ ಅಭಿವೃದ್ಧಿಗೆ ಚಾಲನೆ

Rashmi Kasaragodu
Updated On : 23 Jan 2014, 1:39 am

ಭೇರ್ಯ: ಸಿಂಗನಹಳ್ಳಿ- ಹೆಬ್ಸೂರು ಗೇಟ್ (ಬೆಂಗಳೂರು- ಜಲಸೂರು ರಾಜ್ಯ ಹೆದ್ದಾರಿ 85) ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಾ.ರಾ. ಮಹೇಶ್ ಮಂಗಳವಾರ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಭೇರ್ಯ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕು ವ್ಯಾಪ್ತಿಗೊಳಪಡುವ ಸುಮಾರು 21 ಕಿ.ಮೀ. ಉದ್ದದ ಈ ರಸ್ತೆಯನ್ನು ಅಂದಾಜು 9 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಬಹಳ ಹಿಂದೆಯೇ ಅಭಿವೃದ್ಧಿಯಾಗಬೇಕಿತ್ತು. ಕ್ಷೇತ್ರ ವ್ಯಾಪ್ತಿಗೊಳಪಡುವ ರಾಜ್ಯ ಹೆದ್ದಾರಿ 57(ಬಾಗಲಕೋಟೆ- ಬಿಳಿಗಿರಿರಂಗನಬೆಟ್ಟ)ರ ಭೇರ್ಯ, ಹೊಸ ಅಗ್ರಹಾರ, ಅರ್ಜುನಹಳ್ಳಿ, ಬಡಕನಕೊಪ್ಪಲು, ಹಂಪಾಪುರ ಹಾಗೂ ಕೃಷ್ಣರಾಜನಗರ ಪಟ್ಟಣ  ಪರಿಮಿತಿಯ 8.43 ಕಿ.ಮೀ. ರಸ್ತೆಯನ್ನು ಅಂದಾಜು 3.10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ಎಇಇ ರವಿಕುಮಾರ್, ಎಇ ಪ್ರಭಾಕರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾದಿಕ್ ಖಾನ್, ಗ್ರಾಪಂ ಉಪಾಧ್ಯಕ್ಷ ಕುಮಾರ್, ಮುದುಗುಪ್ಪೆ ಮಂಜೇಗೌಡ, ವಕೀಲ ಶಿವಶಂಕರ್, ಗ್ರಾಪಂ ಮಾಜಿ ಅಧ್ಯಕ್ಷ ಅನೀಫ್ಗೌಡ, ಎಪಿಎಂಸಿ ನಿರ್ದೇಶಕ ಓಬೇಗೌಡ, ಗುತ್ತಿಗೆದಾರ ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement