ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಪ್ರೀತಿ ಹುಟ್ಟಬೇಕು

Rashmi Kasaragodu
Updated On : 24 Jan 2014, 2:14 am

ಹುಣಸೂರು: ನಮ್ಮ ಸಂಸ್ಕೃತಿಯಿಂದ ಮರೆಯಾಗುತ್ತಿರುವ ಜನಪದ ಹಾಡುಗಳನ್ನು ಯುವಜನರಿಗೆ ಪರಿಚಯಿಸುವ ಸಲುವಾಗಿ ಕಾಲೇಜುಗಳಲ್ಲಿ ನುರಿತ ಹಾಡುಗಾರರಿಂದ ಹಾಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಪ್ರೀತಿ ಹುಟ್ಟು ಹಾಕಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಪದವಿ ಕಾಲೇಜು, ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸಗ್ರಹಣ, ಹಾಡಿರೇ ರಾಗಗಳ ತೂಗೀರೆ ದೀಪಗಳ ಜಾನಪದ ಗೀತ ಗಾಯನ ಹಾಗೂ ಯುವ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲ ವರ್ಗದವರು ಪ್ರತಿಭೆ ಪ್ರದರ್ಶಿಸುವ ಸೌರಭ ಕಾರ್ಯಕ್ರಮ ಮತ್ತು ಯುವ ಕಲಾವಿದರಿಗೆ ಯುವ ಸೌರಭ, ಪುಟಾಣಿಗಳ ಪ್ರತಿಭೆ ಅಭಿವ್ಯಕ್ತಪಡಿಸಲು ಚಿಗುರು ಕಾರ್ಯಕ್ರಮ ಇದೆ. ಪ.ಜಾತಿ,  ಪ.ವರ್ಗದವರಿಗೆ ವಾದ್ಯ ಪರಿಕರ, ವೇಷಭೂಷಣ ಒದಗಿಸಿ ಸಾಂಸ್ಕೃತಿಕವಾಗಿ ಮುಖ್ಯವಾಹಿನಿಗೆ ತರುವ ಹಾಗೂ ಬಯಲು ರಂಗಮಂದಿರ ನಿರ್ಮಿಸಿ ಕೊಡುವ ಯೋಜನೆ ಇದೆ ಎಂದರು.
ಶಾಸಕ ಎಚ್.ಪಿ. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ನೆಹರು ಯುವ ಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್ ಮಾತನಾಡಿದರು. ಮೈಸೂರು ವಿವಿ ಲಲಿತಕಲಾ ವಿಭಾಗದ ಡಾ.ಕೆ. ಕುಮಾರ್, ಪ್ರಾಂಶುಪಾಲ ಪ್ರೊ.ಎಚ್.ಸಿ. ಲೋಹಿತಾಶ್ವ, ಜಿಪಂ ಸದಸ್ಯೆ ಡಾ.ಪುಷ್ಪ ಅಮರನಾಥ್, ಅಧ್ಯಾಪಕ ಪುಟ್ಟಶೆಟ್ಟಿ, ಸ್ಪೂರ್ತಿ ಸಂಸ್ಥೆಯ ಸುಧಾಮಣಿ, ನೆಹರು ಯುವ ಕೇಂದ್ರದ ಗೋವಿಂದನಾಯಕ, ಚಿಲ್ಕುಂದ ಮಹೇಶ್ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement