ಶ್ರೀರಾಮ ಲೋಡಿಂಗ್ ಸಂಘದ ವಾರ್ಷಿಕೋತ್ಸವ
ಹ್ಯಾಂಡ್ಪೋಸ್ಟ್: ಎಚ್.ಡಿ. ಕೋಟೆ ತಾಲೂಕಿನ ಯರಹಳ್ಳಿ ಗ್ರಾಮದಲ್ಲಿರುವ ಶ್ರೀರಾಮ ಲೋಡಿಂಗ್- ಅನ್ಲೋಡಿಂಗ್ ವರ್ಕರ್ಸ್ ಯೂನಿಯನ್ನ 3ನೇ ವಾರ್ಷಿಕ ಮಹಾಸಭೆಯು ಮಂಗಳವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಕಾರ್ಮಿಕ ಇಲಾಖೆಯ ಮೇಲ್ವಿಚಾರಕ ಎಂ. ಶಿವಣ್ಣ ಮಾತನಾಡಿ, ಸಂಘ ಸ್ಥಾಪನೆಯಿಂದ ಪರಸ್ಪರ ಸಹಕಾರ ಮನೋಭಾವನೆ ಬೆಳೆಸಿಕೊಳ್ಳಬಹುದು. ಯಾವುದೇ ದ್ವೇಷ ಮನೋಭಾವಗಳನ್ನು ಬಿಟ್ಟು, ಒಗ್ಗಟ್ಟು ಪ್ರದರ್ಶಿಸಬಹುದು. ಅಸಂಘಟಿತ ವಲಯ ಕಾರ್ಮಿಕ, ಸಾಮಾಜಿಕ ಭದ್ರತೆ ಮಂಡಳಿಯಿಂದ ಕಾರ್ಮಿಕರಿಗೆ ಎನ್ಪಿಎಸ್ ಲೈಟ್ ಸ್ವಾವಲಂಬನೆ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ಗಾರೆ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರವಿ, ಪದಾಧಿಕಾರಿಗಳಾದ ಶ್ರೀನಿವಾಸಮೂರ್ತಿ, ಚಿಕ್ಕಣ್ಣ, ಡಿ. ಗುರುಸ್ವಾಮಿ ಇದ್ದರು.