ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹಿರಿಯ ರಂಗನಟ ಬಿ.ಜಿ. ರಾವ್ ನಿಧನ

Rashmi Kasaragodu
Updated On : 24 Jan 2014, 1:43 am

ಮೈಸೂರು: ಕನ್ನಡ ವೃತ್ತಿರಂಗಭೂಮಿಯ ಹಿರಿಯ ಕಲಾವಿದ ಬಿ.ಜಿ. ರಾವ್ (80) ಅವರು ಗುರುವಾರ ಬೆಳಗ್ಗೆ ರಾಜೇಂದ್ರ ನಗರದ ತಮ್ಮ ನಿವಾಸದಲ್ಲಿ ನಿಧನರಾದರು. ಪತ್ನಿ ಇಂದ್ರಾಬಾಯಿ, ಮೂವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ನಟರಾಗಿ, ನಿರ್ದೇಶಕರಾಗಿ ಹಾಗೂ ನಾಟಕಕಾರರಾಗಿ 50 ವರ್ಷಗಳಿಗೂ ಹೆಚ್ಚು ಕಾಲ ನಾಟಕರಂಗದಲ್ಲಿ ಸೇವೆ ಸಲ್ಲಿಸಿದ್ದ ಅವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ನಾಟಕ ಅಕಾಡೆಮಿಯು ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಅಹಲ್ಯ ನಾಟಕ ಮಂಡಳಿ ಎಂಬ ವೃತ್ತಿ ಕಂಪನಿ ಸ್ಥಾಪಿಸಿ, ರಾಜ್ಯದ ನಾನಾ ಭಾಗಗಳಲ್ಲಿ ನಾಟಕ ಪ್ರದರ್ಶಿಸಿದ್ದರು. ನಂತರ ನಷ್ಟದಿಂದ ಕಂಪನಿ ಮುಚ್ಚಿದ ಮೇಲೆ ಉಜ್ವಲ ಕನ್ನಡ ಕಲಾಸಂಘ ಎಂಬ ಹವ್ಯಾಸಿ ತಂಡ ಕಟ್ಟಿಕೊಂಡು ರಂಗಸೇವೆಯಲ್ಲಿ ತೊಡಗಿದ್ದರು. ಸುಮಾರು 6 ತಿಂಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಎನ್.ಆರ್. ಮೊಹಲ್ಲಾದ ಸ್ಮಶಾನದಲ್ಲಿ ಗುರುವಾರ ಸಂಜೆ ಅಂತ್ಯಸಂಸ್ಕಾರ ನೆರವೇರಿತು.  


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement