ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಕ್ರಮ ಮರಳುಗಾರಿಕೆ ವಿರುದ್ಧ ಕಾರ್ಯಾಚರಣೆ

Rashmi Kasaragodu
Updated On : 25 Jan 2014, 1:55 am

ಟಿ. ನರಸೀಪುರ: ಅಕ್ರಮ ಮರಳುಗಾರಿಕೆ ಹಾಗೂ ಸಾಗಾಣಿಕೆ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಒಂದು ಗೂಡ್ಸ್ ವಾಹನ, 28 ಎತ್ತಿನ ಗಾಡಿ ಹಾಗೂ 14 ಕೊಪ್ಪರಿಕೆಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಕಾವೇರಿ ಮತ್ತು ಕಪಿಲಾ ನದಿಗಳ ಪಾತ್ರಗಳಲ್ಲಿ ಹಲವೆಡೆ ಅಕ್ರಮ ಮರಳು ದಂಧೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಎಸ್ಐ ಕೆ.ಆರ್. ಗೋಪಿಕೃಷ್ಣ ಅವರ ನೇತೃತ್ವದಲ್ಲಿ ದಾಳಿ ಮಾಡಿರುವ ಪೊಲೀಸರು, ಮರಳು ತುಂಬಿದ ಗೂಡ್ಸ್ ವಾಹನ ಸೇರಿದಂತೆ 28ಕ್ಕೂ ಹೆಚ್ಚು ಎತ್ತಿನಗಾಡಿಗಳನ್ನು ವಶಪಡಿಸಿಕೊಂಡು, 14 ಕೊಪ್ಪರಿಕೆಗಳನ್ನು ನಾಶಪಡಿಸಿದ್ದಾರೆ.
ಪಟ್ಟಣದ ಹಳೇ ಸಂತೇಮಾಳದ ಹಾಗೂ ಕೃಷ್ಣಾಪುರದ ಬಳಿ 14 ಕೊಪ್ಪರಿಕೆಗಳು, ನಿಲಸೋಗೆ ಬಳಿ 5 ಎತ್ತಿನಗಾಡಿ, ಗರ್ಗೇಶ್ವರಿಯಲ್ಲಿ 2 ಎತ್ತಿನಗಾಡಿ, ದೊಡ್ಡೇಬ್ಬಾಗಿಲಿನಲ್ಲಿ ಒಂದು ಎತ್ತಿನಗಾಡಿ, ಕೃಷ್ಣಾಪುರದಲ್ಲಿ 13 ಎತ್ತಿನಗಾಡಿ ಹಾಗೂ ವಾಹನ, ತುಂಬಲ ಮೂರು ಎತ್ತಿನಗಾಡಿ, ಟೌನ್ ಕುರುಬಗೇರಿಯಲ್ಲಿ ನಾಲ್ಕು ಎತ್ತಿನಗಾಡಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಜವರಪ್ಪ, ಶ್ರೀನಿವಾಸ್, ಶಿವಸ್ವಾಮಿ, ರಾಜಶೇಖರ್, ಜವರೇಶ್ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement