ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಉದ್ಯೋಗ ಪಡೆಯಲು ಪರಿಶ್ರಮ ಅವಶ್ಯ: ಸಿ. ರಾಜು

Rashmi Kasaragodu
Updated On : 26 Jan 2014, 2:22 am

ಮೈಸೂರು: ಯಾವುದೇ ಉದ್ಯೋಗ ಪಡೆಯಬೇಕಾದರೆ ಪರಿಶ್ರಮ ಅವಶ್ಯಕ ಎಂದು ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತ ಸಿ.ರಾಜು ಹೇಳಿದರು. ಕುವೆಂಪು ವಿದ್ಯಾವರ್ಧಕ ಟ್ರಸ್ಟ್ನ ವಿವೇಕಾನಂದ ಪದವಿಪೂರ್ವ ಕಾಲೇಜು ವತಿಯಿಂದ ಜಯಲಕ್ಷ್ಮೀಪುರಂನ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಕಾಲೇಜು ವಾರ್ಷಿಕೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಕೆ.ಎಂ. ಪುಟ್ಟು ಮಾತನಾಡಿ, ಮೊಬೈಲ್, ಇಂಟರ್ನೆಟ್ ಮತ್ತಿತರ ಹವ್ಯಾಸದಲ್ಲಿ ಕಾಲಹರಣವನ್ನು ಹೆಚ್ಚಾಗಿ ಮಾಡದೆ, ವ್ಯಾಸಂಗಕ್ಕೆ ಹೆಚ್ಚಿನ ಒತ್ತು ನೀಡುವಲ್ಲಿ ಇಂದಿನ ಯುವಜನತೆ ಮುಂದಾಗಬೇಕು. ಶೇ.75 ಹಾಜರಾತಿ ಇರಬೇಕು. ಪರೀಕ್ಷೆ ಎದುರಿಸಿ ಉತ್ತಮ ಫಲಿತಾಂಶ ಪಡೆಯಲು ಪರಿಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು. ಕುವೆಂಪು ವಿದ್ಯಾ ಪರಿಷತ್ ಅಧ್ಯಕ್ಷ ಪ್ರೊ.ಎಸ್.ಎನ್. ರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement