ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗುರುತಿನ ಚೀಟಿ ವಿತರಿಸಿ ಮತದಾನ ದಿನಾಚರಣೆ

Rashmi Kasaragodu
Updated On : 26 Jan 2014, 2:23 am

ಹುಣಸೂರು,: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಪವಿತ್ರವಾದದ್ದು. ಯಾವ ವ್ಯಕ್ತಿ ಮತದಾನ ಮಾಡುವುದಿಲ್ಲವೋ ಅಂತಹವರು ದೇಶಕ್ಕೆ ಮಾಡಿದ ದ್ರೋಹ ಮತ್ತು ಅಪಮಾನ ಎಂದು ಶಾಸಕ ಎಚ್.ಪಿ. ಮಂಜುನಾಥ್ ಅಭಿಪ್ರಾಯಪಟ್ಟರು. ಪಟ್ಟಣದ ಆರ್ಯ ವೈಶ್ಯ ಕಲ್ಯಾಣ ಮಂಟಪದಲ್ಲಿ ಶನಿವಾರ ಮಹಿಳಾ ಪ್ರಥಮ ದರ್ಜೆ ಕಾಲೇಜು ವತಿಯಿಂದ ಏರ್ಪಡಿಸಿದ್ದ ಮತದಾನ ದಿನಾಚರಣೆಯಲ್ಲಿ ನೂತನ ಮತದಾರರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದ ಅವರು, ರಾಜೀವ್ ಗಾಂಧಿ ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ 18 ವರ್ಷ ತುಂಬಿದವರನ್ನು ಮತದಾನ ಹಕ್ಕು ನೀಡುವ ಬಗ್ಗೆ ವಿಶಿಷ್ಟವಾಗಿ ಆಚರಿಸಿ ಅರಿವು ಮೂಡಿಸಲಾಗಿತ್ತು ಎಂದು ಸ್ಮರಿಸಿದರು. ಪ್ರಾಂಶುಪಾಲ ಸೌಭಾಗ್ಯಮ್ಮ, ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಲೋಹಿತಾಶ್ವ, ತಹಸೀಲ್ದಾರ್ ವೆಂಕಟಚಾಲಪ್ಪ, ಪ್ರಾಧ್ಯಾಪಕ ಪುಟ್ಟಶೆಟ್ಟಿ, ಜಿಪಂ ಮಾಜಿ ಸದಸ್ಯ ಡಿ.ಕೆ. ಕುನ್ನೇಗೌಡ ಇದ್ದರು.

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮರ


ಬೈಲಕುಪ್ಪೆ: ಇಲ್ಲೊಂದು ತೇಗದಮರ ಒಣಗಿ ನಿಂತಿದ್ದು, ಹಲವಾರು ತಿಂಗಳು ಕಳೆದರೂ ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಗಾಡನಿದ್ರೆಯಲ್ಲಿದ್ದಾರೆ. ಮರದ ಅಕ್ಕಪಕ್ಕದಲ್ಲಿ ಹಲವಾರು ಕುಟುಂಬಗಳು ವಾಸಿಸುತ್ತಿದ್ದು, ಯಾವ ವೇಳೆಯಲ್ಲಿ ಮನೆಯ ಮೇಲೆ ಬೀಳುತ್ತದೆಯೋ ಎಂದು ಜನರು ಭಯಭೀತರಾಗಿದ್ದಾರೆ. ಈ ಮರ 1ನೇ ಕ್ಯಾಂಪ್ ರಸ್ತೆಯ ಪಕ್ಕದಲ್ಲಿದ್ದು, ಈ ರಸ್ತೆಯಲ್ಲಿ ಸದಾ ಪಾದಚಾರಿಗಳು ಹಾಗೂ ನೂರಾರು ವಾಹನಗಳು ಓಡಾಡುತ್ತಿದ್ದು, ಇಲ್ಲಿಯ ಜನರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಈ ಮರ ದೊಡ್ಡಹರವೆ ಅರಣ್ಯ ಸಂರಕ್ಷಣಾ ವ್ಯಾಪ್ತಿಗೆ ಬರುತ್ತದೆ. ದೊಡ್ಡ ಹರವೆ ಅರಣ್ಯ ಸಂರಕ್ಷಣಾಧಿಕಾರಿ ರವಿ ಅವರ ಗಮನಕ್ಕೆ ಈ ವಿಷಯ ತಂದಾಗ, ಪಿರಿಯಾಪಟ್ಟಣದ ವಲಯ ಅರಣ್ಯಾಧಿಕಾರಿಗಳಿಗೆ ಅರ್ಜಿ ಕೊಡಿ ಎಂದು ಹೇಳುತ್ತಾರೆ.  ಈ ಕೂಡಲೇ ಈ ಮರ ಕಡಿದು ತೊಂದರೆ ತಪ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement