ತಹಸೀಲ್ದಾರ್ ವಿರುದ್ಧ ದಲಿತರ ಪ್ರತಿಭಟನೆ
ಟಿ. ನರಸೀಪುರ: ದಲಿತ ವಿರೋಧಿ ಧೋರಣೆ ಅನುಸರಿಸುತ್ತಿರುವ ತಹಸೀಲ್ದಾರ್ ಅರುಣಪ್ರಭ ಅವರನ್ನು ಅಮಾನತುಗೊಳಿಸಿ, ಜೀತದಾಳು ಶಿವಕುಮಾರ್ ಆತ್ಮಹತ್ಯೆ ಪ್ರಕರಣದಲ್ಲಿ ನೀಡಿದ್ದ ಭರವಸೆಗಳು ಈಡೇರಿಸಲು ಆಗ್ರಹಿಸಿ ಹಾಗೂ ದಲಿತ ಮುಖಂಡರ ಮೇಲಿನ ಸುಳ್ಳು ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟಿಸಿದರು. ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ ಅವರನ್ನು ಅಮಾನತಿನಲ್ಲಿಟ್ಟು, ಕೊತ್ತೇಗಾಲದಲ್ಲಿ ಆತ್ಮಹತ್ಯೆ ಮಾಡಿಕೊಂಡ ಜೀತದಾಳು ಶಿವಕುಮಾರ್ ಕುಟುಂಬಕ್ಕೆ ದೌರ್ಜನ್ಯ ಪ್ರಕರಣದಲ್ಲಿ 5 ಲಕ್ಷ ಪರಿಹಾರ ನೀಡಬೇಕು. ಪ್ರತಿಭಟನೆ ನಡೆಸಿದ ದಸಂಸ ಮುಖಂಡರ ಮೇಲಿನ ಮೊಕದ್ದಮೆ ಹಿಂಪಡೆಯುವಂತೆ ಪ್ರತಿಭಟನಾ ಧರಣಿಯನ್ನು ಆರಂಭಿಸಿದರು