ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರಕೃತಿ ವಿರುದ್ಧದ ಬದುಕು ಅಪಾಯ: ಕೆ.ಎಂ. ಪುಟ್ಟು

Rashmi Kasaragodu
Updated On : 26 Jan 2014, 2:23 am

ಮೈಸೂರು: ಮನುಷ್ಯ ಪ್ರಕೃತಿಗೆ ವಿರುದ್ಧವಾಗಿ ಬದುಕುವುದು ಅಪಾಯಕಾರಿ ಎಂದು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಂ. ಪುಟ್ಟು ಹೇಳಿದರು. ಮಹಾರಾಜ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೃಷ್ಣರಾಜ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಹಪಠ್ಯ ಚಟುವಟಿಕೆಗಳ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಹಾಗೂ ಮಹಾರಾಜ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಎಸ್ ಶ್ರೀಧರರಾಜೇ ಅರಸ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ನಗರಪಾಲಿಕೆ ಸದಸ್ಯರಾದ ಡಿ.ನಾಗಭೂಷಣ್, ಎಸ್.ಬಾಲು, ಲಕ್ಷ್ಮೀಪುರಂ ಠಾಣೆ ಇನ್ಸ್ಪೆಕ್ಟರ್ ಪಿ.ಎಂ. ಸಿದ್ದರಾಜು ಅವರು ಮುಖ್ಯ ಅತಿಯಾಗಿದ್ದರು. ಪ್ರಾಂಶುಪಾಲ ಟಿ.ಆರ್. ಸಿದ್ದರಾಜು, ಉಪಪ್ರಾಂಶುಪಾಲ ಸಿದ್ಧರಾಮೇಗೌಡ ಇದ್ದರು.

ರಾಜ್ಯಮಟ್ಟದ ಹೆಜ್ಜೆ ಗೆಜ್ಜೆ ನೃತ್ಯೋತ್ಸವ ಆರಂಭ

ಮೈಸೂರು: ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ನಾಟ್ಯ ಶೈಲಿಯ ರಾಜ್ಯಮಟ್ಟದ ಎರಡು ದಿನಗಳ ನೃತ್ಯೋತ್ಸವ ಕಾರ್ಯಕ್ರಮವು ಜಗನ್ಮೋಹನ ಅರಮನೆಯಲ್ಲಿ ಶನಿವಾರ ಆರಂಭವಾಯಿತು. ಶ್ರೀನಿಮಿಷಾಂಬ ನೃತ್ಯ ಶಾಲೆಯು ಆಯೋಜಿಸಿರುವ ಈ ನೃತ್ಯೋತ್ಸವದಲ್ಲಿ ಶಾಸ್ತ್ರೀಯ, ಪಾಶ್ಚಾತ್ಯ ಹಾಗೂ ಜಾನಪದ ಶೈಲಿಯ ಗೀತೆಗಳಿಗೆ ಕಲಾವಿದರು ಹೆಜ್ಜೆ ಹಾಕಿದರು. ಏಕವ್ಯಕ್ತಿ ಹಾಗೂ ಸಮೂಹ ಪ್ರದರ್ಶನ ನೀಡಿದ ಸ್ಪರ್ಧಿಗಳು ಕನ್ನಡ, ಹಿಂದಿ, ಇಂಗ್ಲಿಷ್ ಮತ್ತಿತರ ಭಾಷೆಯ ಹಾಡಿಗಳಿಗೆ ಮನಮೋಹಕವಾಗಿ ನೃತ್ಯ ಮಾಡಿ ಸಭಿಕರ ಪ್ರಶಂಸೆಗೆ ಪಾತ್ರರಾದರು. ಕಿರಿಯರು, ವಯಸ್ಕರು ಹಾಗೂ ಹಿರಿಯರಿಗಾಗಿ ಪ್ರತ್ಯೇಕವಾದ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆದಿದೆ. 26 ರಂದು ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ಶಾಸಕ ವಾಸು, ಚಿತ್ರನಿರ್ದೇಶಕ ಸುಧಾಕರ್ ಸಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ರಾಷ್ಟ್ರಕವಿ ಕುವೆಂಪು ಕಲಾನಿಕೇತನದ ಅಧ್ಯಕ್ಷ ಡಿ.ಪ್ರಕಾಶ್ ಹಾಗೂ ಚಿತ್ರನಟ ಮಧುಹೆಗ್ಡೆ ಭಾಗವಹಿಸುವರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement