ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಹಕಾರ ಅಗತ್ಯ

Rashmi Kasaragodu
Updated On : 26 Jan 2014, 2:24 am

ಹುಣಸೂರು: ಅಪಾಯಕಾರಿ ಉದ್ದಿಮೆಗಳಲ್ಲಿ ಬಾಲ ಕಾರ್ಮಿಕರ ನೇಮಕಾತಿ ಮತ್ತು ಕೆಲಸಕ್ಕೆ ನಿಯೋಜಿಸುವುದು ಕಡ್ಡಾಯವಾಗಿ ನಿಷೇಧಿಸಲ್ಪಟ್ಟಿದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಕಾರ್ಮಿಕ ಇಲಾಖೆಯ ನಿರೀಕ್ಷಕ ಶಶಿಧರ್ ಹೇಳಿದರು. ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಡೀಡ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ಅರಿವು ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಪಂ ಇಒ ಡಾ. ಪ್ರೇಮಕುಮಾರ್, ಕೃಷಿ ಸಹಾಯಕ ನಿರ್ದೇಶಕ ಜೆ.ವೆಂಕಟೇಶ್, ಜಿಪಂ ಎಇಇ ಪೂಣಚ್ಚ, ಡೀಡ್ ಬಾಲಕಾರ್ಮಿಕ ಶಾಲೆಯ ಶಿಕ್ಷಕ ಜಿ.ಎಸ್. ಜಗದೀಶ್, ಪುರಸಭೆ ಪರಿಸರ ಎಂಜಿನಿಯರ್ ರವಿಕುಮಾರ್, ಆರೋಗ್ಯ ಸಹಾಯಕ ಸತೀಶ್, ಶಿಕ್ಷಣ ಇಲಾಖೆಯ ವ್ಯವಸ್ಥಾಪಕ ಸಿದ್ದಲಿಂಗಪ್ಪ, ಸಿಆರ್ಪಿ ಮಹೇಶ್ ಭಾಗವಹಿಸಿದ್ದರು.


ಮನೆ ಮನೆಗೆ ಮೋದಿ ಕುರಿತ ಪುಸ್ತಕ ವಿತರಣೆ

ನಂಜನಗೂಡು: ತಾಲೂಕು ಬಿಜೆಪಿ ಕಾರ್ಯಕರ್ತರು ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಯಶೋಗಾಥೆ ಕುರಿತ ಕಿರು ಪುಸ್ತಕವನ್ನು ಶನಿವಾರ ಪಟ್ಟಣದ ಮನೆ ಮನೆಗಳಿಗೆ ವಿತರಿಸಿದರು. ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಾ. ಬಿಜೆಪಿ ಅಧ್ಯಕ್ಷ ಕೆ.ಎಂ. ಮಹೇಶ್, ಜಿಪಂ ಸದಸ್ಯ ಡಾ. ಶಿವರಾಂ, ತಾಪಂ ಅಧ್ಯಕ್ಷ ಎಸ್.ಎಂ. ಮಲ್ಲಿಕಾರ್ಜುನಸ್ವಾಮಿ, ಉಪಾಧ್ಯಕ್ಷೆ ಚಿಕ್ಕೀರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ, ಸದಸ್ಯ ಮಂಜುನಾಥ್, ಯುವ ಮೋರ್ಚಾ ಅಧ್ಯಕ್ಷ ರಮೇಶ್, ಮುಳ್ಳೂರು ಶೇಖರ್, ಸತ್ಯನಾರಾಯಣ ಕದಂ, ವಾಲ್ಟರ್ ಬುತೇಲೋ, ಎನ್.ಆರ್. ಕೃಷ್ಣಪ್ಪಗೌಡ, ನಾಗರಾಜು, ಸಿದ್ದರಾಜು, ಕಪಿಲೇಶ್, ಸಣ್ಣಯ್ಯ, ಶಿವಲಿಂಗಸ್ವಾಮಿ ರಾಜಶೇಖರ್, ನಾಗಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement