ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂಗವಿಕಲರಿಗೆ ಕೆನರಾ ಬ್ಯಾಂಕ್ ನೆರವಿನ ಹಸ್ತ

Rashmi Kasaragodu
Updated On : 27 Jan 2014, 1:29 am

ಮೈಸೂರು: ಸಮಾಜದಲ್ಲಿನ ಅಂಗವಿಕಲರಿಗೆ ಸಹಾಯಹಸ್ತ ನೀಡುವ ಮೂಲಕ ಕೆನರಾ ಬ್ಯಾಂಕ್ ವೃತ್ತ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ನಜರಬಾದಿನ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಬ್ಯಾಂಕ್ ವೃತ್ತ ಕಚೇರಿಯ ಮುಖ್ಯಸ್ಥ ಡಾ.ಎಸ್.ಟಿ. ರಾಮಚಂದ್ರ, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಬ್ಯಾಂಕ್ಗಳ ಪಾತ್ರ ಮುಖ್ಯವಾಗಿದ್ದು, ಬಡವರು, ಹಿಂದುಳಿದವರು, ಸಮಾಜದ ದುರ್ಬಲ ವರ್ಗದವರು, ಅಲ್ಪಸಂಖ್ಯಾತರು, ಮಹಿಳೆಯರು ಮುಂತಾದವರಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಿ ಅವರ ಏಳಿಗೆಗೆ ಶ್ರಮಿಸುವುದರ ಮೂಲಕ ದೇಶಸೇವೆ ಮಾಡುವಂತ ಅವಕಾಶ ಒದಗಿದೆ ಎಂದರು.
ಉತ್ತಮ ಬ್ಯಾಂಕಿಂಗ್ ಸೇವೆ ನೀಡುವುದರ ಮೂಲಕ ನಮ್ಮ ದೇಶಭಕ್ತಿ ಮೆರೆಯಬೇಕು. ಉತ್ತಮ ಗ್ರಾಹಕ ಸೇವೆಯ ಮೂಲಕ ಸಮಾಜದ ವಿಶ್ವಾಸ ಮತ್ತು ಗೌರವ ಗಳಿಸಬೇಕೆಂದು ಕರೆ ನೀಡಿದರು.
ನವ ಜೀವನ ನಿಕೇತನ ಸಂಸ್ಥೆಯ ಅಂಗವಿಕಲರಿಗೆ 7 ಗಾಲಿ ಕುರ್ಚಿಗಳನ್ನು ವಿತರಿಸಲಾಯಿತು. ಈ ವೇಳೆ ಅಜಿತ ನೆಲೆ ಅನಾಥಶ್ರಮದ ಮಕ್ಕಳು, ಯೋಗ-ಗುಚ್ಚ, ನವಿಲು ಕುಣಿತ, ಮತ್ತು ದೇಶಭಕ್ತಿ ಗೀತೆಗಳನ್ನು ಹಾಡಿ ನೆರೆದವರ ಮನರಂಜಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement