ಆಟೋ ಚಾಲಕರ ಸಂಘ
ಹುಣಸೂರು: ಪಟ್ಟಣದ ಶಾಲಾ ಕಾಲೇಜು ಮತ್ತು ಸರ್ಕಾರಿ ಖಾಸಗಿ ಕಚೇರಿಗಳು ಸೇರಿದಂತೆ ವಿವಿಧೆಡೆ ನಡೆದ 65ನೇ ವರ್ಷದ ಗಣರಾಜ್ಯೋತ್ಸವ ಆಚರಿಸಲಾಯಿತು. ರೋಟರಿ ವಿದ್ಯಾಸಂಸ್ಥೆಯಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ರಾಜಶೇಖರ್ ಧ್ವಜಾರೋಹಣ ನೆರವೇರಿಸಿದರು. ಶಾಲಾ ಸಮಿತಿ ಅಧ್ಯಕ್ಷ ಆರ್. ಅನಂದ್, ಕಾರ್ಯದರ್ಶಿ ಹನಗೋಡು ನಟರಾಜ್, ರೋಟರಿ ಸದಸ್ಯರಾದ ಧರ್ಮಾಪುರ ನಾರಾಯಣ್, ಶಿವಕುಮಾರ್ ರಾವ್, ಡಾ.ಸರೋಜಿನಿ ವಿಕ್ರಂ, ಮುಖ್ಯಶಿಕ್ಷಕ ರೇಣುಕಾಪ್ರಸಾದ್ ಇದ್ದರು. ಆಟೋ ನಿಲ್ದಾಣ ಮತ್ತು ಶಾಸ್ತ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸೇರಿದಂತೆ ಸರ್ಕಾದ ಎಲ್ಲಾ ಕಚೇರಿಗಳಲ್ಲಿಯೂ ಧ್ವಜಾರೋಹಣ ಮಾಡಿ ರಾಷ್ಟ್ರದ ಏಕತೆ ಮೆರೆದರು.