ನಾಡಿನ ಋಣ ತೀರಿಸುವುದು ಎಲ್ಲರ ಹೊಣೆ
ಪಿರಿಯಾಪಟ್ಟಣ: ನಾಡು ನುಡಿಯ ಋಣ ತೀರಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಕರವೇ ಜಿಲ್ಲಾಧ್ಯಕ್ಷ ಪ್ರವೀಣ್ಕುಮಾರ್ ಹೇಳಿದರು. ಪಟ್ಟಣದ ರೋಟರಿ ಭವನದಲ್ಲಿ ನೂತನ ತಾ. ಘಟಕ ಹಾಗೂ ಇನ್ನಿತರ ಘಟಕಗಳಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾಯಿತ್ರಿ ವಿಜಯೇಂದ್ರ ಮಾತನಾಡಿದರು. ನಾಟಿ ವೈದ್ಯ ಹಾಗೂ ತಾ. ಕರವೇ ಉಪಾಧ್ಯಕ್ಷ ಸೈಯದ್ ಫಯಾಜ್ ಹಾಗೂ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿ ವಿಜಯೇಂದ್ರ ಅವರನ್ನು ಸನ್ಮಾನಿಸಲಾತು. ತಾ. ಅಧ್ಯಕ್ಷ ಎನ್.ಎಲ್. ಗಿರೀಶ್, ವಿವಿಧ ಘಟಕಗಳ ಪದಾಧಿಕಾರಿಗಳಾದ ಕಿರಣ್ಗೌಡ, ಸಿ.ಎನ್. ವಿಜಯ್, ಸೈಯದ್ಫಯಾಜ್, ಪ್ರವೀಣ್, ಪ್ರೀತಿ ಅರಸ್, ನವೀದಾಬಾನು, ಪ್ರಕಾಶ್, ಸಂತೋಷ್ಗೌಡ, ವೆಂಕಟೇಶ್, ಮೀಸಂ ಅಬ್ಬಾಸ್, ಬಸವಣ್ಣ, ಮಹೇಶ್ ಇದ್ದರು.