ಸುಲಿಗೆ ಮಾಡುತ್ತಿದ್ದ ಮೂವರ ಸೆರೆ
ಮೈಸೂರು: ನಗರದ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ, 35 ಸಾವಿರ ಮೌಲ್ಯದ ದ್ವಿಚಕ್ರ ವಾಹನ, ಮೊಬೈಲ್ಗಳು ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ತಾಲೂಕು ಮಂಡಕಳ್ಳಿ ನಿವಾಸಿಗಳಾದ ಮಹದೇವ ಎಂಬವರ ಪುತ್ರ ಭರತ್ಕುಮಾರ್ (19), ದಾಸ ಎಂಬವರ ಪುತ್ರ ರಾಜು (22) ಮತ್ತು ಅಶೋಕಪುರಂ ಕೃಷ್ಣ ಎಂಬವರ ಪುತ್ರ ರಘು ಅ. ಕುಂಚ (20) ಬಂಧಿತ ಆರೋಪಿಗಳು.
ಇವರು ಎಕ್ಸ್ಎಲ್ ಪ್ಲಾಂಟ್ ಹತ್ತಿರ ಹೋಗುತ್ತಿದ್ದ ಕುಲದೀಪ್ ಸಹಾನಿ ಮತ್ತು ಕಿಶನ್ ಎಂಬವರ ಮೇಲೆ ಹಲ್ಲೆ ನಡೆಸಿ, ಹಣ ದೋಚಿದ್ದರು. ಇದೇ ರೀತಿ ಜೆ.ಪಿ. ನಗರದ ಕವಿತಾ ಬೇಕರಿ ಬಳಿ ಹಿರೋ ಪುಕ್ ಹೋಗುತ್ತಿದ್ದ ಮಣಿಕಂಠ ಎಂಬವರನ್ನು ತಡೆದು ಹಲ್ಲೆ ನಡೆಸಿ, ಹಿರೋಪುಕ್ ವಾಹನ ಮತ್ತು ಹಣ ಕಸಿದುಕೊಂಡಿದ್ದರು. ಈ ಮೂವರನ್ನು ಪೊಲೀಸರು ಬಂಧಿಸಿ, ಹಿರೋಪುಕ್ ವಾಹನ, 4 ಮೊಬೈಲ್, 2,500 ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಬೈಕ್, ಮರದ ದೊಣ್ಣೆ, ಚಾಕುವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಮರನಾಥ್ ನಿಧನ
ಮೈಸೂರು: ಕುಸ್ತಿ ಕಲಾರತ್ನ ದಿ.ಪೈ. ಎ. ಶಿವನಂಜಪ್ಪ ಅವರ ಪುತ್ರ ಎ.ಎಸ್. ಅಮರನಾಥ್ (60) ಅವರು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು. ಇವರಿಗೆ ಪತ್ನಿ ಮಂಜುಳಾ, ಪುತ್ರ ಎಂ.ಎ. ನಯನಕಮಾರ್, ಸಹೋದರರಾದ ಪೈ. ಎಸ್. ಮಹದೇವ್, ಎಂಡಿಸಿಸಿ ಬ್ಯಾಂಕ್ನ ಉಪಾಧ್ಯಕ್ಷ ಎಸ್. ಚಂದ್ರಶೇಖರ್ ಇದ್ದಾರೆ. ಅಂತ್ಯಕ್ರಿಯೆಯು ಚಾಮುಂಡಿಬೆಟ್ಟದ ಬಳಿಯ ಹರಿಶ್ಚಂದ್ರಘಾಟ್ನಲ್ಲಿ ಜ.27ರ ಮ.12ಕ್ಕೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.