ಉಪ್ಪಾರ ಯುವಕರ ಸಭೆ
ಸಾಲಿಗ್ರಾಮ: ತಾಲೂಕಿನ ಉಪ್ಪಾರ ಜನಾಂಗದ ಯುವಕರ ಸಭೆಯು ಜ.28ರ ಬೆಳಿಗ್ಗೆ 11ಕ್ಕೆ ಕೆ.ಆರ್. ನಗರದಲ್ಲಿರುವ ಶ್ರೀರಾಮ ಮಂದಿರದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಯುವ ವೇದಿಕೆಯ ರಾಜ್ಯಾಧ್ಯಕ್ಷ ಸೋಮಶೇಖರ್ ನೇತೃತ್ವದಲ್ಲಿ ಕರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9901535234 ಸಂಪಕಿಸಬಹುದು.
ಬೈಲಕುಪ್ಪೆಯಲ್ಲಿ ಗಣರಾಜ್ಯೋತ್ಸವ
ಬೈಲಕುಪ್ಪೆ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗಣರಾಜೋತ್ಸವ ಆಚರಿಸಲಾಯಿತು. ಮುಖ್ಯಶಿಕ್ಷಕ ಶಿವಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು. ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಇದೇ ವೇಳೆ ಗಣಿತ ಹಾಗೂ ಹಿಂದಿಯಲ್ಲಿ ಉತ್ತಮ ಅಂಕಗಳನ್ನು ಪಡೆದು 7ನೇ ತರಗತಿಯ ವಿದ್ಯಾರ್ಥಿಗಳಾದ ಸಿಂಧ್ಯಾ ಮತ್ತು ಕಾವ್ಯ ಅವರಿಗೆ ಬಹುಮಾನ ವಿತರಿಸಿದರು. ಇದೇ ವೇಳೆ ಶಿಕ್ಷಕರಾದ ಚಂದ್ರಶೇಖರ್, ಮಧುರ ಅನ್ನಪೂರ್ಣ, ಅನಂತಚಾರಿ ಇದ್ದರು.