ಎಸ್ಬಿಎಂ ಎಟಿಎಂಗೆ ಚಾಲನೆ
ಮೈಸೂರು: ನಗರದ ಸಂಗೊಳ್ಳಿ ರಾಯಣ್ಣ (ಕುರುಬರಹಳ್ಳಿ ಸರ್ಕಲ್) ವೃತ್ತದಲ್ಲಿ ಸ್ಟೇಟ್ ಬ್ಯಾಂಕ್ ಅಫ್ ಮೈಸೂರಿನ ನೂತನ ಎಟಿಎಂ ಅನ್ನು ಶಾಸಕ ಎಂ.ಕೆ. ಸೋಮಶೇಖರ್ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಆಡಳಿತ ತರಬೇತಿ ಸಮುಚ್ಚಯ, ಕೆಎಸ್ಆರ್ಪಿ ವಸತಿ ಗೃಹಗಳು, ಕೆ.ಸಿ. ಲೇಔಟ್, ಕುರುಬರಹಳ್ಳಿ ಜನರಿಗೆ ಉಪಯುಕ್ತ ಎಂದರು.
ಮುಖ್ಯ ಅತಿಥಿಗಳಾಗಿ ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಅಮಿತಾಪ್ರಸಾದ್ ಮಾತನಾಡಿ, ಪಾರಂಪರಿಕ ನಗರವಾದ ಮೈಸೂರಿಗೆ ಪ್ರತಿದಿನ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದೇ ವೇಳೆ ಚಾಮುಂಡಿ ಬೆಟ್ಟ ಮತ್ತು ಸ್ಥಳೀಯ ಭೇಟಿ ವೇಳೆ ಈ ಎಟಿಎಂ ಸೌಲಭ್ಯ ಉಪಯುಕ್ತವಾಗುವುದೆಂದು ಆಶಿಸಿ ಸೌಲಭ್ಯ ಒದಗಿಸಿದ ಸ್ಟೇಟ್ ಬ್ಯಾಂಕ್ ಅಫ್ ಮೈಸೂರಿನ ಅಧಿಕಾರಿಗಳಿಗೆ ಅಭಿನಂದಿಸಿದರು.
ಪ್ರಾದೇಶಿಕ ವ್ಯವಸ್ಥಾಪಕರಾದ ಎಸ್. ಬಂಗಾರರಾಜು, ಮೈಸೂರು ವಲಯದ ಉಪ ಪ್ರಧಾನ ವ್ವವಸ್ಥಾಪಕ ಬಾಲಕಿಶನ್, ಸಹಾಯಕ ಪ್ರಧಾನ ವ್ಯವಸ್ಥಾಪಕ ವಿನಾಯಕ ಕೈಸರೆ, ರಾಜೇಂದ್ರ, ನಾಗರಾಜ ಇದ್ದರು.