ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಪದಚ್ಯುತಿ
ಭೇರ್ಯ: ಭೇರ್ಯ ಗ್ರಾಪಂ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ವಿರುದ್ಧ ಸದಸ್ಯರು ಸೋಮವಾರ ಬೆಳಗ್ಗೆ ಅವಿಶ್ವಾಸ ಮಂಡಿಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದರು. ಉಪ ವಿಭಾಗಾಧಿಕಾರಿ ಬಸವರಾಜು ಅವರು ಭೇರ್ಯ ಗ್ರಾಪಂ ಅಧ್ಯಕ್ಷೆ ಜಯಮಾಲ ನಟರಾಜ್ ಮತ್ತು ಉಪಾಧ್ಯಕ್ಷ ಬಿ.ಕೆ. ಕುಮಾರ್ ವಿರುದ್ಧ ಅವಿಶ್ವಾಸ ಮತಕ್ಕೆ ಸೋಮವಾರ ದಿನಾಂಕ ನಿಗದಿಗೊಳಿಸಿದ್ದರು. ಒಟ್ಟು 17 ಸದಸ್ಯರ ಪೈಕಿ 12 ಮಂದಿ ಸದಸ್ಯರು ಅವಿಶ್ವಾಸಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಬಸವರಾಜ್ ಅವರು ಅಧ್ಯಕ್ಷೆ ಜಯಮಾಲ ನಟರಾಜ್ ಮತ್ತು ಉಪಾಧ್ಯಕ್ಷ ಬಿ.ಕೆ. ಕುಮಾರ್ ಅವರನ್ನು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದೆ ಎಂದು ಘೋಷಿಸಿದರು. ಗ್ರಾಪಂ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.