ಬತ್ತದ ಮೆದೆಗೆ ಬೆಂಕಿ: ಅಪಾರ ನಷ್ಟ
ಸಾಲಿಗ್ರಾಮ: ಆಕಸ್ಮಿಕ ಬೆಂಕಿ ಬಿದ್ದು ತೆನೆಯುಳ್ಳ ಬತ್ತದ ಮೆದೆಯು ಸುಟ್ಟು ಕರಕಲಾಗಿ, ಸುಮಾರು ಎರಡು ಲಕ್ಷ ರು. ನಷ್ಟವಾಗಿರುವ ಘಟನೆ ಕೆ.ಆರ್. ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದಲ್ಲಿ ಜರುಗಿದೆ.
ಊರಿನಿಂದ ಹೊರಭಾಗದಲ್ಲಿ ಚಿಕ್ಕೇಗೌಡ ಮತ್ತು ಸುಬ್ಬೇಗೌಡ ಎಂಬವರಿಗೆ ಸೇರಿದ ಸುಮಾರು ನಾಲ್ಕು ಎಕರೆಗೂ ಅಧಿಕ ಜಮೀನಿನಲ್ಲಿ ಬೆಳೆದಿದ್ದ ಬತ್ತದ ತೆನೆಯಲ್ಲಿ ಹುಲ್ಲನ್ನು ಒಕ್ಕಣೆ ಮಾಡುವ ಸಲುವಾಗಿ ಒಂದೆಡೆ ಮೆದೆ ಹಾಕಿದ್ದರು. ಬೆಂಕಿ ನಂದಿಸಲು ಜಮೀನಿನ ಸುತ್ತಮುತ್ತಲಿದ್ದ ಜನರು ಹರಸಾಹಸ ಪಟ್ಟರು.
ಕೆ.ಆರ್. ನಗರದ ಅಗ್ನಿಶಾಮಕ ವಾಹನ ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಸಾಕಷ್ಟು ಬತ್ತದ ಮೆರೆ ಸುಟ್ಟು ಹೋಗಿತ್ತು. ಈ ಬೆಂಕಿಯ ಅವಘಡದಿಂದ ವರ್ಷಪೂರ್ತಿ ಬೆಳೆದ ಬೆಳೆಯು ಸಂಪೂರ್ಣ ನಾಶವಾಗಿದ್ದು, ಇದರ ಮಾಲೀಕರಾದ ಚಿಕ್ಕೇಗೌಡ ಮತ್ತು ಸುಬ್ಬೇಗೌಡ ಸಂಕಷ್ಟ ಪರಿಸ್ಥಿತಿಗೆ ಸಿಲುಕಿದ್ದಾರೆ. ಈ ಬೆಳೆಯನ್ನು ಬೆಳೆಯಲು ಅವರು ಸಾಲ ಮಾಡಿದ್ದು, ಈಗ ನಿಸ್ಸಾಹಯಕರಾಗಿದ್ದಾರೆ. ಇವರಿಗೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರವನ್ನು ರೈತರು ಒತ್ತಾಯಿಸಿದ್ದಾರೆ.