ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಾಜಿ ಸಚಿವ ಎಸ್. ನಂಜಪ್ಪಗೆ ಶ್ರದ್ಧಾಂಜಲಿ

Rashmi Kasaragodu
Updated On : 28 Jan 2014, 1:01 am

ಸಾಲಿಗ್ರಾಮ: ತಮ್ಮ ಅಧಿಕಾರವಧಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದರ ಜೊತೆಗೆ, ವಿಶ್ವಾಸದ ರಾಜಕಾರಣವನ್ನು ಮಾಜಿ ಸಚಿವ ಎಸ್. ನಂಜಪ್ಪ ಅವರು ಮಾಡಿದ್ದರೆಂದು ಸಾಲಿಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಡಿಸಿಯ ಪದನಿಮಿತ್ತ ಅಧ್ಯಕ್ಷ ಪ್ರೇಮ್ಕುಮಾರ್ ಜೈನ್ ಹೇಳಿದರು.
ಅವರು ಸೋಮವಾರ ಪಟ್ಟಣದ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಾಜಿ ಸಚಿವ ದಿ ಎಸ್. ನಂಜಪ್ಪ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ನಂಜಪ್ಪ ಅವರು ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದವರು. ತಮ್ಮ ಬದುಕಿನುದ್ದಕ್ಕೂ ಎಂದೂ ವೈರಾಗ್ಯದ ಮನೋಭಾವನೆ ಹೊಂದದೆ ಸರ್ವರೊಂದಿಗೂ ಸ್ನೇಹ ಜೀವಿಯಾಗಿದ್ದರು. ಇವರು ಎಲ್ಲೂ ತಮ್ಮ ಜೀವನದಲ್ಲಿ ಅಹಂಕಾರವನ್ನು ಪಡದೆ, ತಮ್ಮ ಬದುಕನ್ನು ಸರಳವಾಗಿ ನಡೆಸುವ ಮೂಲಕ ರಾಜಕೀಯ ಕ್ಷೇತ್ರದಲ್ಲಿನ ನಾಯಕರಲ್ಲಿ ಗುರುತಿಸುವಂತಹ ಮೇರು ವ್ಯಕ್ತಿತ್ವ ಹೊಂದಿದ್ದರು. ಕಾಲೇಜು ಪ್ರಾಂಶುಪಾಲ ಪ್ರಕಾಶ್, ಪ್ರಾಧ್ಯಾಪಕರಾದ ಮಿರ್ಲೆ ಮೃತ್ಯುಂಜಯ, ಶ್ರೀನಿವಾಸ್, ಬಸವಂತಪ್ಪ ಗುದಗತ್ತಿಯರ್, ಮಂಜುನಾಥ, ವಿಷಕಂಠಯ್ಯ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement