ವೈದ್ಯ, ಎಂಜಿನಿಯರಿಂಗ್ ಕಾಲೇಜಿಗೆ ಒತ್ತಾಯ
ಭೇರ್ಯ: ಚುಂಚನಕಟ್ಟೆಯಲ್ಲಿ ವೈದ್ಯಕೀಯ ಹಾಗೂ ಮಿರ್ಲೆ ಗ್ರಾಮದಲ್ಲಿ ಎಂಜಿನಿಯರಿಂಗ್ ಕಾಲೇಜು ತೆರೆಯಲು ಸರ್ಕಾರವನ್ನು ಒತ್ತಾಯಿಸುವುದಾಗಿ ಶಾಸಕ ಸಾ.ರಾ. ಮಹೇಶ್ ಹೇಳಿದರು.
ಮಿರ್ಲೆ ಗ್ರಾಮದಲ್ಲಿ ಶುಕ್ರವಾರ ಕೋಟಿ ರು. ವೆಚ್ಚದ ಸರ್ಕಾರಿ ಪಾಲಿಟೆಕ್ನಿಕ್ ಮಹಿಳಾ ನೂತನ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದರು. ಮಿರ್ಲೆ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದ ಅವರು, ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೌಲಭ್ಯ, ತಂಗುದಾಣ ನಿರ್ಮಾಣ ಹಾಗೂ ಕಾಲೇಜು ಸಂಪರ್ಕ ರಸ್ತೆ ಅಭಿವೃದ್ಧಿಗೊಳಿಸಲಾಗುವುದು. ಅಲ್ಲದೆ ರಕ್ಷಣಾ ಸಿಬ್ಬಂದಿ ನೇಮಕ ಹಾಗೂ ಕಾಲೇಜು ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಿಪಂ ಸದಸ್ಯೆ ಕಲ್ಪನಾ ಧನಂಜಯ್, ತಾಪಂ ಸದಸ್ಯರಾದ ಸೀತಾರಾಂ, ವಿಜಯಲಕ್ಷ್ಮೀ, ಲೋಕೋಪಯೋಗಿ ಎಇಇ ರವಿಕುಮಾರ್, ಎಇ ರಂಗರಾಮ್, ಪಿಎಸಿಸಿ ಅಧ್ಯಕ್ಷ ಹನುಮೇಗೌಡ, ಎಪಿಎಂಸಿ ನಿರ್ದೇಶಕ ಸೋಮು, ಗ್ರಾಪಂ ಅಧ್ಯಕ್ಷೆ ಸುಮಾ, ಪ್ರಾಂಶುಪಾಲ ತ್ಯಾಗರಾಜ್, ಜೆಡಿಎಸ್ನ ಧನಂಜಯ್ ಇದ್ದರು.