ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸರಗೂರು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಯಿಂದ ಅಕ್ರಮ

Rashmi Kasaragodu
Updated On : 28 Jan 2014, 1:03 am

ಮೈಸೂರು: ಎಚ್.ಡಿ. ಕೋಟೆ ತಾಲೂಕಿನ ಸರಗೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕರಿಬಸವಯ್ಯ ಅವರು ಅಕ್ರಮ ಎಸಗಿದ್ದಾರೆ ಎಂದು ಸರಗೂರು ಪಪಂ ಕಾಂಗ್ರೆಸ್ ಸದಸ್ಯ ರಮೇಶ್ ಆರೋಪಿಸಿದರು.
ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಬಡವರಿಗೆ ಮೀಸಲಾಗಿರುವ ಶೇ.22.75 ಮತ್ತು ಶೇ.7.25 ಯೋಜನೆಯಡಿ 7.78 ಲಕ್ಷ ವೆಚ್ಚದಲ್ಲಿ ಸೋಲಾರ್ ಬೀದಿ ದೀಪದ ಸಾಮಗ್ರಿ ಖರೀದಿಯಲ್ಲಿ ಮುಖ್ಯಾಧಿಕಾರಿ ಕಾನೂನು ಗಾಳಿಗೆ ತೂರಿದ್ದಾರೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಮುಖ್ಯಾಧಿಕಾರಿಯವರು ತಮಗೆ ಬೇಕಾದ ಕಂಪನಿ ಮೂಲಕ ತೀರಾ ಕಳಪೆ ಮಟ್ಟದ ಸಾಮಗ್ರಿಗಳನ್ನು ಖರೀದಿಸಿ, ಪರಿಶಿಷ್ಟರಿಗೆ ಮತ್ತು ಸರ್ಕಾರಕ್ಕೆ ವಂಚಿಸಿದ್ದಾರೆ. ಭಾರತದಲ್ಲಿ ಡಿಜಿಎಸ್ ಮತ್ತು ಡಿ ದರಪಟ್ಟಿಯನ್ನು ಒಟ್ಟು 34 ಕಂಪನಿಗಳು ಮಾತ್ರ ಮಾನ್ಯತೆ ಪಡೆದಿದ್ದು, ಈ ಕಂಪನಿಗಳ ದಾಖಲೆಗಳನ್ನು ತೆಗೆದುಕೊಂಡು ನಕಲಿ ದಾಖಲೆ ಸೃಷ್ಟಿಸಿ ದರಪಟ್ಟಿ ತಿದ್ದುಪಡಿ ಮಾಡಲಾಗಿದೆ.
ಒಂದು ಸೋಲಾರ್ ದೀಪಕ್ಕೆ 43,255 ನಮೂದಿಸಿ ಒಟ್ಟು 18 ದೀಪಕ್ಕೆ 7.78 ಲಕ್ಷ ಬಿಲ್ ಪಾವತಿಸಿ ಹಣ ಲಪಟಾಯಿಸಿದ್ದಾರೆ. ಮಾನ್ಯತೆ ಪಡೆದ ಕಂಪನಿಗಳು 1 ದೀಪಕ್ಕೆ 31,500 ನಮೂದಿಸಿವೆ. ಆದರೆ, ನಕಲಿ ದಾಖಲೆ ಸೃಷ್ಟಿಸಿದ ಕಂಪನಿಯೊಂದರ 1 ದೀಪಕ್ಕೆ 43,255 ನಮೂದಿಸಿದೆ. ಈ ಕಂಪನಿ ಮೂಲಕ ದೀಪ ಖರೀದಿಸಿ ಸುಮಾರು 2 ಲಕ್ಷ ಹೆಚ್ಚಿಗೆ ನೀಡಿ ಮುಖ್ಯಾಧಿಕಾರಿಯವರು ಪಪಂಗೆ ನಷ್ಟವುಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಅಕ್ರಮ ಎಸಗಿರುವ ಮುಖ್ಯಾಧಿಕಾರಿ ಕರಿಬಸವಯ್ಯ ಅವರನ್ನು ಸೇವೆಯಿಂದ ವಜಾಗೊಳಿಸಿ, ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement