ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎನ್.ಆರ್. ಠಾಣೆ ಇನ್‌ಸ್ಪೆಕ್ಟರ್ ಅಮಾನತು ಮಾಡಿ

Mainashree
Updated On : 28 Jan 2014, 10:33 am

ಮೈಸೂರು: ಸದ್ಗುರು ಸಮರ್ಥ ಕಬೀರ್ ಶ್ರೀರಾಮ ಮಂದಿರದ ಪೀಠಾಧಿಪತಿ ಶ್ರೀ ಸತ್ಯನಾರಾಯಣ ದಾಸ್ ಅವರ ಮೇಲೆ ಹಲ್ಲೆ ನಡೆಸಿರುವ ಎನ್.ಆರ್. ಠಾಣೆ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ಅವರನ್ನು ಅಮಾನತುಗೊಳಿಸಬೇಕು ಎಂದು ಬಿಜೆಪಿ ಮುಖಂಡ ಗಿರಿಧರ್ ಒತ್ತಾಯಿಸಿದರು.
ಟ್ರಸ್ಟ್ ವತಿಯಿಂದ ಜ.25 ರಂದು ಪಟ್ಟಾಭಿಷೇಕ, ದತ್ತಾತ್ರೇಯ ಉತ್ಸವ ಮತ್ತು ಸಮರ್ಥ ಪಾದುಕೆ ಪಲ್ಲಕ್ಕಿ ಉತ್ಸವ ನಡೆಸಲು ಪೊಲೀಸರಿಂದ ಅನುಮತಿ ಪಡೆಯಲಾಗಿತ್ತು. ಆದರೆ ಟ್ರಸ್ಟ್‌ನ ಮತ್ತೊಂದು ಗುಂಪಿನವರಾದ ಚಂದ್ರಶೇಖರ್, ಪ್ರಭಾಕರ್, ವಸಂತ, ಕಲಾವತಿ, ಶಿವಕುಮಾರ್, ಸೌಭಾಗ್ಯಮ್ಮ, ಲೀಲಾವತಿ ಮತ್ತು ಗಣೇಶ್‌ಕುಮಾರ್ ಅವರು ಅಡ್ಡಿಪಡಿಸಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ನಮಗೆ ರಕ್ಷಣೆ ನೀಡುವ ಬದಲು ನಮ್ಮ ಬಳಿ ಇದ್ದ ಉತ್ಸವ ನಡೆಸುವ ಅನುಮತಿ ಪತ್ರ ಕಸಿದುಕೊಂಡರು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಅಲ್ಲದೆ ಪುಟ್ಟರಾಜಪ್ಪ ಅವರ ಮಕ್ಕಳು ಸತ್ಯನಾರಾಯಣ ದಾಸ್ ಅವರ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿ, ಈಗ ಮಾಡಲಾದ ಸಾರ್ವಜನಿಕ ಟ್ರಸ್ಟ್ ರದ್ದುಪಡಿಸದಿದ್ದರೆ ಕೊಲೆ ಮಾಡುವುದಾಗಿ ಹೇಳಿದರು. ಈ ಸಂಬಂಧ ರಕ್ಷಣೆ ಕೋರಿ ದಾಸ್ ಜ.26ರ ಸಂಜೆ ದೂರು ನೀಡಲು ಹೋದಾಗ ಇನ್‌ಸ್ಪೆಕ್ಟರ್ ಪರಶಿವಮೂರ್ತಿ ಮತ್ತು ಸಿಬ್ಬಂದಿ ನಿಂದಿಸಿ, ಬೂಟ್ ಕಾಲಿನಿಂದ ಒದ್ದು, ಕುತ್ತಿಗೆ ಹಿಡಿದು ಅವರನ್ನು ಆಚೆಗೆ ದಬ್ಬಿದ್ದಾರೆ ಎಂದು ದೂರಿದರು.
ಆದ್ದರಿಂದ ಕೂಡಲೆ ಪರಶಿವಮೂರ್ತಿ ಅವರ ವಿರುದ್ಧ ನಗರ ಪೊಲೀಸ್ ಆಯುಕ್ತರು ಶಿಸ್ತುಕ್ರಮ ಜರುಗಿಸಿ ಅಮಾನತುಗೊಳಿಸಬೇಕು. ಸತ್ಯ ನಾರಾಯಣದಾಸ್ ಅವರಿಗಾದ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement