ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಏಕಾಗ್ರತೆ, ಛಲ ಮೈಗೂಡಿಸಿಕೊಳ್ಳಿ

Mainashree
Updated On : 28 Jan 2014, 10:34 am

ಟಿ. ನರಸೀಪುರ: ಪಂಚೇಂದ್ರಿಯಗಳಿಗೆ ವಿದ್ಯಾರ್ಥಿಗಳು ಗುಲಾಮರಾಗದೆ ಏಕಾಗ್ರತೆ ಹಾಗೂ ಛಲ ಮೈಗೂಡಿಸಿಕೊಂಡು ಭವಿಷ್ಯದಲ್ಲಿ ಭವ್ಯ ಜೀವನ ರೂಪಿಸಿಕೊಳ್ಳಬೇಕು ಎಂದು ಡಿಡಿಪಿಯು ಕೆ.ಎಂ. ಪುಟ್ಟು ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರೌಢಶಿಕ್ಷಣ ಪೂರ್ಣಗೊಳಿಸಿ ಕಾಲೇಜು ಶಿಕ್ಷಣ ಪಡೆಯುವ ಕಾಲಘಟ್ಟದಲ್ಲಿಯೇ ವಿದ್ಯಾರ್ಥಿಗಳ ಸಮೂಹಕ್ಕೆ ಭಗೀರಥನ ಶ್ರಮ ಮತ್ತು ದುರ್ಯೋಧನನ ಛಲ ಇರಬೇಕು. ಕಲಿತ ವಿದ್ಯೆಯನ್ನು ಆಗಾಗ ಮೆಲುಕು ಹಾಕುತ್ತಿರಬೇಕು ಎಂದರು.
ವಿದ್ಯಾರ್ಥಿ ದೆಸೆಯಲ್ಲಿಯೇ ಮೌಲ್ಯಯುತ ಗುಣ ಬೆಳೆಸಿಕೊಳ್ಳಬೇಕು. ಮನಸ್ಸನ್ನು ಆಸೆಯೆಂಬ ಹುಚ್ಚು ಕುದುರೆಗೆ ಹಚ್ಚಬೇಡಿ. ಸಾರ್ವಜನಿಕವಾಗಿ ವಿದ್ಯಾರ್ಥಿಗಳ ನಡವಳಿಕೆಯನ್ನು ಪ್ರತಿಯೊಬ್ಬರೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಉತ್ತಮ ಶಿಕ್ಷಣ ಹಾಗೂ ಬದುಕನ್ನು ರೂಪಿಸಿಕೊಂಡು ಹೆತ್ತವರಿಗೆ ಹಾಗೂ ಓದಿದ ಶಾಲಾ ಕಾಲೇಜಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಉಪ ಖಜಾನಾಧಿಕಾರಿ ಎನ್.ಬಿ. ರಾಜಶೇಖರ್ ಮಾತನಾಡಿದರು. ತಾಪಂ ಅಧ್ಯಕ್ಷ ಚಿದರವಳ್ಳಿ ನಟರಾಜು, ಕಾಲೇಜು ಪ್ರಾಂಶುಪಾಲ ಟಿ.ಆರ್. ಜಯರಾಮ, ಉಪನ್ಯಾಸಕರಾದ ಎಚ್.ಎಂ. ನಂಜುಂಡಸ್ವಾಮಿ, ವಿ.ಡಿ. ಶಿವಣ್ಣ, ಎಂ. ಶಿವಪ್ಪ, ಎಲ್. ಸುವರ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement