ಕಣೆನೂರಿನಲ್ಲಿ ಕಣ್ಣಿನ ಉಚಿತ ತಪಾಸಣೆ
ಮೈಸೂರು: ಕುವೆಂಪುನಗರದ ವಿವಿಧ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಯಶಸ್ವಿ ಗ್ರೂಪ್ ಆಫ್ ಸೋಷಿಯಲ್ ವರ್ಕ್ಸ್, ಕಣೇನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮೈಸೂರಿನ ಅನ್ನಪೂರ್ಣ ಚಾರಿಟಬಲ್ ಆಸ್ಪತ್ರೆ ವತಿಯಿಂದ ನಂಜನಗೂಡು ತಾ. ಕುರಿಹುಂಡಿಗ್ರಾಮ ಪಂಚಾಯತ್ ವ್ಯಾಪ್ತಿಯ ಕಣೇನೂರಿನಲ್ಲಿ 50ಕ್ಕೂ ಹೆಚ್ಚು ಜನರಿಗೆ ಉಚಿತ ನೇತ್ರ ತಪಾಸಣೆ ನಡೆಯಿತು. 14 ಜನರಿಗೆ ಕಣ್ಣಿನ ಪೂರೆ ಇದ್ದು, ಅವರು ದೃಷ್ಟಿದೋಷದಿಂದ ಬಳಲುತ್ತಿದ್ದನ್ನು ಪತ್ತೆ ಹಚ್ಚಿ ಅವರಿಗೆ ಅನ್ನಪೂರ್ಣ ಚಾರಿಟಬಲ್ ಟ್ರಸ್ಟ್ ಆಸ್ಪತ್ರೆಯಲ್ಲಿ ನೇತ್ರ ತಜ್ಞರಾದ ಡಾ. ವಿದ್ಯಾಶಂಕರ್ ನೇತೃತ್ವದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿತು. ಯಶಸ್ವಿ ಗ್ರೂಪ್ ಆಫ್ ಸೋಷಿಯಲ್ ವರ್ಕ್ಸ್‌ನ ಅಧ್ಯಕ್ಷೆ ಬಿ.ಸಿ. ಸೌಜನ್ಯಶೇಖರ್, ಎಚ್.ಕೆ. ರಚನಾ, ಎಸ್. ಸುಶ್ಮಿತಾ, ಆರ್. ಶಿವಕುಮಾರ್, ವಂದನಾ, ಮಸೂರ ತಜ್ಞ ವಿಜಯಶಂಕರ್, ಶಾಲಾ ಮುಖ್ಯೋಪಾಧ್ಯಾಯ ಶಂಕರೇಗೌಡ ಹಾಗೂ ಕಣೇನೂರು ಗ್ರಾಮದ ಮುಖಂಡರು ಉಚಿತ ನೇತ್ರ ತಪಾಸಣೆ ಶಿಬಿರ ನಡೆಸಿಕೊಟ್ಟಿತು.