ಕಾಡಾನೆ ದಾಳಿ: ವ್ಯಕ್ತಿಗೆ ಗಾಯ
ಎಚ್.ಡಿ. ಕೋಟೆ: ಕಾಡಾನೆ ದಾಳಿಯಿಂದಾಗಿ ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಹುಣಸೇಕುಪ್ಪೆ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಕಾಳಯ್ಯ ಎಂಬವರ ಪುತ್ರ ಜಗದೀಶ್ (55) ಎಂಬಾತ ಮಂಗಳವಾರ ಬೆಳಗ್ಗೆ 6ರ ಸಮಯದಲ್ಲಿ ಹಾಲಿನ ಡೇರಿಗೆ ತೆರಳುವಾಗ ಆತನ ಮೇಲೆ ಕಾಡಾನೆಯೊಂದು ದಾಳಿ ನಡೆಸಿದೆ. ಆನೆಯು ಸೊಂಡಲಿನಿಂದ ಜಗದೀಶ್ ಅವರನ್ನು ಬಿಸಾಡಿ, ಎರಡು ಕಾಲನ್ನು ತುಳಿದಿದ್ದು, ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದರೆ, ಮೈಸೂರಿಗೆ ಕರೆದುಕೊಂಡು ಹೋಗಲಾವುದೆಂದು ಅಂತರಸಂತೆ ವಲಯಾರಣ್ಯಾಧಿಕಾರಿ ಪೂವಯ್ಯ ತಿಳಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ತಹಸೀಲ್ದಾರ್ ಕೃಷ್ಣ, ಆರ್‌ಐ ರವಿಚಂದ್ರ ಭೇಟಿ ನೀಡಿದ್ದರು.