ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನೋಂದಣಿ, ಪರವಾನಗಿ ಪಡೆಯಲು ಸೂಚನೆ

Mainashree
Updated On : 28 Jan 2014, 10:28 am

ಮೈಸೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಮತ್ತು ನಿಯಮಗಳು-2011ರಡಿ ಆಹಾರ ವ್ಯಾಪಾರಸ್ಥರು ಪರವಾನಗಿ ಪಡೆಯುವುದು ಕಡ್ಡಾಯವಾಗಿರುತ್ತದೆ. ವರ್ಷಕ್ಕೆ 12 ಲಕ್ಷಕ್ಕೆ ಮಿಗಿಲಾಗಿ ವ್ಯವಹರಿಸುವ ಆಹಾರ ವಸ್ತುಗಳ ವಹಿವಾಟುದಾರರು ಪರವಾನಗಿಯನ್ನು ಹಾಗೂ 12 ಲಕ್ಷಕ್ಕಿಂತ ಕಡಿಮೆ ವ್ಯವಹರಿಸುವ ಆಹಾರ ವಸ್ತುಗಳ ವಹಿವಾಟುದಾರರು ನೋಂದಣಿ ಮಾಡಿಸಿಕೊಳ್ಳಬೇಕಿದೆ. ಚಾಲ್ತಿಯಲ್ಲಿರುವ ಎಲ್ಲ ಬಗೆಯ ಆಹಾರ ಪದಾರ್ಥಗಳ ವಹಿವಾಟುದಾರರು ಪರವಾನಗಿ, ನೋಂದಣಿ ಪಡೆಯಲು ಫೆ.4 ಕಡೆಯ ದಿನವಾಗಿದೆ. ನಂತರ ಪರವಾನಗಿ ರಹಿತ ಆಹಾರ ವಸ್ತುಗಳ ವ್ಯವಹಾರವು ಕಾನೂನು ಬಾಹಿರವಾಗಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಸೆಕ್ಷನ್-63 ರನ್ವಯ 5 ಲಕ್ಷ ದಂಡ ಮತ್ತು 6 ತಿಂಗಳ ಸೆರೆವಾಸ ವಿಧಿಸಬಹುದು ಎಂದು ಆಹಾರ ಸುರಕ್ಷತೆ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಂಕಿತ ಅಧಿಕಾರಿಗಳ ಕಾರ್ಯಾಲಯ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ನಗರಪಾಲಿಕೆಯ ವ್ಯಾಪ್ತಿ, ಎನ್‌ಪಿಸಿ ಆಸ್ಪತ್ರೆ ಆವರಣ, ಮೈಸೂರು, ದೂ.2438144ನ್ನು ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement