ಬಿ.ಇಡಿ ದಾಖಲಾತಿ ಎರಡನೇ ಪಟ್ಟಿ ಪ್ರಕಟ
ಮೈಸೂರು: 2013-14ನೇ ಸಾಲಿನ ಬಿ.ಇಡಿ ದಾಖಲಾತಿ ಪ್ರಕ್ರಿಯೆಯಲ್ಲಿ ಮೂದಲನೇ ಆಯ್ಕೆ ಪಟ್ಟಿಯಲ್ಲಿ ಸ್ಥಳ ಬದಲಾವಣೆ ಬಯಸಿರುವ, ನಕ್ಷತ್ರ ಗುರುತಿರುವ ಹಾಗೂ ಮೊದಲನೇ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಿ ಕಟ್ ಆಫ್ಗಿಂತ ಆಯಾ ಪ್ರವರ್ಗದಡಿಯಲ್ಲಿ ಶೇಕಡಾವಾರು ಅಂಕ ಗಳಿಸಿರುವ ಅಭ್ಯರ್ಥಿಗಳ ಪಟ್ಟಿಯನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಆಯಾ ಜಿಲ್ಲಾ ನೋಡಲ್ ಕೇಂದ್ರದಲ್ಲಿ ಮೂಲ ದಾಖಲೆಗಳನ್ನು ಪರಿಶೀಲನೆಗೊಳಪಡಿಸಿ ನಿಗದಿತ ಶುಲ್ಕ ಪಾವತಿಸಿ ಫೆ.1 ರೊಳಗೆ ದಾಖಲಾತಿ ಪಡೆಯಹುದು. ಒಂದು ವೇಳೆ ಹಂಚಿಕೆಯಾಗಿರುವ ಬಿ.ಇಡಿ ಕಾಲೇಜುಗಳು ಇಷ್ಟವಾಗದಿದ್ದಲ್ಲಿ ಮುಂದೆ ಕರೆಯುವ ಕೌನ್ಸಿಲ್ಗೆ ಹಾಜರಾಗುವಂತೆ ಡಯಟ್ ಪ್ರಾಂಶುಪಾಲ ಜೊಹರ ಜಬೀನ್ ತಿಳಿಸಿದ್ದಾರೆ. ವೆಬ್ಸೈಟ್- ಢಿಢಿಢಿ.ಝ್ಛ್ಟ್ಟಟಜಜ್ಡ್ಛಛಡ್ಝ್ಟಿಟಿ.್ಞಛ್ಠ.ಟ್ಝ್ಛಿ.್ಝಟಿ ಸಂಪರ್ಕಿಸಬಹುದು.